ಬೆಂಗಳೂರು: ನಾಳೆ (ಮೇ.20) ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಪ್ರತಿಜ್ಞಾವಿಧಿ ಸಮಾರಂಭಕ್ಕೆ ಕಂಠೀರವ ಕ್ರೀಡಾಂಗಣ ರೆಡಿಯಾಗಿದ್ದು, ಸುತ್ತಮುತ್ತ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ವಿವಿಐಪಿ ಎಂಟ್ರಿಗೆ ಪ್ರತ್ಯೇಕವಾಗಿ ವ್ಯವಸ್ಥೆ ಮಾಡಿರುವ ಪೊಲೀಸರು, 2 ಗೇಟ್ಗಳಲ್ಲಿ ವಿವಿಐಪಿ ವಾಹನಗಳ ಪ್ರವೇಶಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಈ ಮಧ್ಯೆ ಹವಾಮಾನ ಇಲಾಖೆ ನಾಳೆ(ಮೇ.20) ರಾಜಧಾನಿಯಲ್ಲಿ ಮಳೆ ಮುನ್ಸೂಚನೆ ನೀಡಿದೆ.
ಬೆಂಗಳೂರು ನಗರದಲ್ಲಿ ಐದು ದಿನಗಳ ಕಾಲ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. 9೦೦ ಮೀಟರ್ ಸಮುದ್ರ ಮಟ್ಟದಿಂದ ಉತ್ತರ ಪ್ರದೇಶದಲ್ಲಿ ವಾಯು ಭಾರ ಕುಸಿತವಾಗಿದ್ದು, ಈ ಹಿನ್ನಲೆ ರಾಜಧಾನಿ ಬೆಂಗಳೂರು ಸೇರಿ ರಾಜ್ಯದಲ್ಲಿ ಐದು ದಿನಗಳ ಮಳೆಯಾಗಲಿದೆ. ನಾಳಿನ ಸಿಎಂ ಪ್ರಮಾಣ ವಚನಕ್ಕೆ ನೆರೆ ರಾಜ್ಯಗಳ ಸಿಎಂಗಳಿಗೆ ಆಹ್ವಾನ ಹಿನ್ನಲೆ ತಮಿಳುನಾಡು ಸಿಎಂ ಬೆಂಗಳೂರಿನ ವೆದರ್ ಫೋರ್ಕ್ಯಾಸ್ಟ್ ಕೇಳಿದ್ದಾರೆ. ನಾಳೆ ಮಧ್ಯಾಹ್ನದ ನಂತರ ಸಾಧಾರಣ ಮಳೆ ಸಾಧ್ಯತೆಯಿದ್ದು, ಬೆಳಗ್ಗೆ ಮೋಡ ಕವಿದ ವಾತಾವರಣ ಇರಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.