ಬೆಳಗಾವಿ: ಮಾರಿಹಾಳ ಗ್ರಾಮದ ಯುವಕನನ್ನು ನಾಲ್ಕೈದು ಜನ ಯುವಕರು ಸೇರಿ ಹತ್ಯೆ ಮಾಡಿರುವ ಘಟನೆ ನಡೆದಿದ್ದು. ಬೆಳಗಾವಿ (Belagavi) ಜಿಲ್ಲೆ ಮಾರಿಹಾಳ ಸರ್ಕಾರಿ ಕನ್ನಡ ಶಾಲಾ ಕೊಠಡಿಯ ಎದುರು ಕೊಲೆಯಾದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದೆ. ಮಹಾಂತೇಶ ರುದ್ರಪ್ಪ ಕರಲಿಂಗನವರ್ (23) ಮೃತ ದುರ್ದೈವಿ ಎಂದು ಗುರುತಿಸಲಾಗಿದ್ದು. ವೈಯಕ್ತಿಕ ದ್ವೇಷ ಹಿನ್ನೆಲೆಯಲ್ಲಿ ಯುವಕನನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ.
ಹಳೆಯ ದ್ವೇಷದ ಹಿನ್ನಲೆ ಯುವಕನನ್ನು ಕೊಲೆಗೈದಿರುವುದು ಮೇಲ್ನೋಟಕ್ಕೆ ತಿಳಿದುಬಂದಿದೆಯಾದರು. ಹತ್ಯೆಗೆ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ.
ಮುಂಜಾನೆಯ ಹೊತ್ತನಲ್ಲೇ ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವಕನ ಮೃತದೇಹ ಕಂಡು ಗ್ರಾಮಸ್ಥರು ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾರೆ. ಸ್ಥಳಕ್ಕೆ ಅಪರಾಧ ವಿಭಾಗದ ಡಿಸಿಪಿ ಪಿ.ವಿ. ಸ್ನೇಹ ಹಾಗೂ ಮರೀಹಾಳ ಇನ್ಸ್ಪೆಕ್ಟರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಂತಕರ ಕಾರ್ಯಕ್ಕೆ ಬಲೆ ಬೀಸಿದ್ದು ಮಾರೀಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.