ನವದೆಹಲಿ: ಶೀಘ್ರದಲ್ಲೇ 500 ನೋಟು ಹಿಂಪಡೆಯಲಾಗುವುದು ಎಂದು ನಾವು ನಿರೀಕ್ಷಿಸಬಹುದೇ ಎಂದು ಎಐಎಂಐಎಂ ರಾಷ್ಟ್ರೀಯ ಅಧ್ಯಕ್ಷ ಅಸಾ ದುದ್ದೀನ್ ಓವೈಸಿ (Asaduddin Owaisi) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಪ್ರಶ್ನೆ ಕೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ಮೋದಿ ಅವರನ್ನು ಆರ್ಥಿಕ ತಜ್ಞ ಎಂದು ಸಂಬೋಧಿಸಿದ ಓವೈಸಿ 2000 ರೂ. ನೋಟು ಹಿಂದಕ್ಕೆ ಪಡೆದ ನಿರ್ಧಾರದ ಬಗ್ಗೆ ಪ್ರಶ್ನೆ ಮಾಡಿದ್ದಾರೆ.
ಓವೈಸಿ ಪ್ರಶ್ನೆಗಳು
1. ಮೊದಲು ನೀವು 2000 ನೋಟನ್ನು ಪರಿಚಯಿಸಿದ್ದು ಯಾಕೆ?
2. ಶೀಘ್ರದಲ್ಲೇ 500 ನೋಟು ಹಿಂಪಡೆಯಲಾಗುವುದು ಎಂದು ನಾವು ನಿರೀಕ್ಷಿಸಬಹುದೇ?
3. 70 ಕೋಟಿ ಭಾರತೀಯರ ಬಳಿ ಸ್ಮಾರ್ಟ್ ಫೋನ್ ಇಲ್ಲ, ಅವರು ಡಿಜಿಟಲ್ ಪಾವತಿ ಮಾಡುವುದು ಹೇಗೆ?
4. ಅಮಾನ್ಯೀಕರಣ 1.0 ಮತ್ತು 2.0 ಮಾಡುವಂತೆ ಮಾಡುವಲ್ಲಿ ಬಿಲ್ ಗೇಟ್ಸ್ ಅವರ ಪಾತ್ರವೇನು?
5. ಎನ್ಪಿಸಿಐಯನ್ನು ಚೀನಾದ ಹ್ಯಾಕರ್ಗಳು ಹ್ಯಾಕ್ ಮಾಡುತ್ತಿದ್ದಾರೆಯೇ? ಹಾಗಿದ್ದಲ್ಲಿ, ಯುದ್ಧ ಸಂಭವಿಸಿದಾಗ ಪಾವತಿ ಮಾಡುವಾಗ ಏನಾಗಬಹುದು?