ಇಂದು ಟಾಲಿವುಡ್ ಸ್ಟಾರ್ ನಟ ಜೂನಿಯರ್ ಎನ್ ಟಿ ಆರ್ ಅವರ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ Jr NTR ನಟನೆಯ 30ನೇ ಸಿನಿಮಾದ ಹೆಸರು, ಪೋಸ್ಟರ್ ಹಾಗೂ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಲಾಗಿದೆ. ಟೈಟಲ್ ರಿಲೀಸ್ ಆಗುತ್ತಿದ್ದಂತೆ ಆ ಸಿನಿಮಾದ ಟೈಟಲ್ ನನ್ನದು, ನನ್ನಿಂದ ಟೈಟಲ್ ಕದ್ದಿದ್ದಾರೆ ಎಂದು ತೆಲುಗು ಖ್ಯಾತ ನಟ ಹಾಗೂ ನಿರ್ಮಾಪಕ ಬಂಡ್ ಗಣೇಶ್ ಆರೋಪಿಸಿದ್ದಾರೆ.
ಜೂನಿಯರ್ ಎನ್ ಟಿ ಆರ್ ನಟನೆಯ 30ನೇ ಸಿನಿಮಾಗೆ ದೇವರ ಎಂದು ಟೈಟಲ್ ಇಡಲಾಗಿದೆ. ಈ ಟೈಟಲ್ ಗೆ ಆಕ್ಷೇಪ ವ್ಯಕ್ತಪಡಿಸಿರುವ ಬಂಡ್ಲ ಗಣೇಶ್, ‘ದೇವರ’ ನನ್ನ ಟೈಟಲ್ ನಾನು ಅದನ್ನು ರಿಜಿಸ್ಟರ್ ಮಾಡಿಸಿದ್ದೆ. ಆದರೆ ಬಹಳ ಕಾಲವಾದ್ದರಿಂದ ಮರೆತು ಹೋಗಿದ್ದೆ, ಈಗ ಅವರು ಟೈಟಲ್ ಅನ್ನು ಕದ್ದಿದ್ದಾರೆ ಎಂದು ಟ್ವೀಟ್ ಮಾಡಿದ್ದರು. ಟ್ವೀಟ್ ಜೊತೆಗೆ ಸಿಟ್ಟಿನ ಇಮೋಜಿಯನ್ನೂ ಹಂಚಿಕೊಂಡಿದ್ದರು.
ಬಂಡ್ಲ ಗಣೇಶ್ ಟ್ವೀಟ್ಗೆ ಹಲವು ಸಿಟ್ಟಿನನ ಪ್ರತಿಕ್ರಿಯೆ ನೀಡಿದ್ದರು, ಜೂ ಎನ್ಟಿಆರ್ ಅಭಿಮಾನಿಗಳು ಬಂಡ್ಲ ಗಣೇಶ್ ವಿರುದ್ಧ ಕಮೆಂಟ್ಗಳನ್ನು ಮಾಡಿದ್ದರು. ಅದಾದ ಬಳಿಕ ಮತ್ತೊಂದು ಟ್ವೀಟ್ ಮಾಡಿದ ಬಂಡ್ಲ ಗಣೇಶ್, ”ನನಗೇನು ಬೇಜಾರಿಲ್ಲ ಬಿಡಿ. ಯಂಗ್ ಟೈಗರ್ (ಜೂ ಎನ್ಟಿಆರ್) ಸಿನಿಮಾ ತಾನೆ, ಅವರೂ ಕೂಡ ನನಗೆ ದೇವರಾ” ಎಂದಿದ್ದರು. ಪೋಸ್ಟರ್ ಬಿಡುಗಡೆ ಆದ ಬಳಿಕ ಅದನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡ ಬಂಡ್ಲ ಗಣೇಶ್ ‘ಅದ್ಭುತವಾಗಿದೆ’ ಎಂದು ಬರೆದುಕೊಂಡಿದ್ದಾರೆ.
ದೇವರ ಎಂದರೆ ಕನ್ನಡದಲ್ಲಿ ದೇವರು ಎಂದರ್ಥ. ಜೂ ಎನ್ಟಿಆರ್ ಹೊಸ ಸಿನಿಮಾಕ್ಕೆ ಇದೇ ಹೆಸರು ಇಡಲಾಗಿದೆ. ಸಮುದ್ರ ತೀರದಲ್ಲಿ ನಡೆವ ಕತೆಯನ್ನು ಸಿನಿಮಾ ಒಳಗೊಂಡಿದೆ. ಸಿನಿಮಾವು ಪೀರಿಯಡ್ ಡ್ರಾಮಾ ಆಗಿದ್ದು ದೈವ-ರಾಕ್ಷಸ ಅಂಶಗಳು ಸಹ ಸಿನಿಮಾದಲ್ಲಿ ಇರುವ ಅನುಮಾನ ಟೀಸರ್ ಹಾಗೂ ಪೋಸ್ಟರ್ನಿಂದ ವ್ಯಕ್ತವಾಗುತ್ತಿವೆ. ಸಮುದ್ರದ ಬಳಿಕ ಹೆಣಗಳ ರಾಶಿ ಹಾಕಿ, ಕೊರಕು ಕಲ್ಲಿನ ಮೇಲೆ ರಕ್ತ ಮೆತ್ತಿದ ಕತ್ತಿ ಹಿಡಿದು ನಿಂತ ಜೂ ಎನ್ಟಿಆರ್ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು ಮುಂದಿನ ವರ್ಷ ಏಪ್ರಿಲ್ನಲ್ಲಿ ಬಿಡುಗಡೆ ಆಗಲಿದೆ.