ಬೆಂಗಳೂರು: ಬಿಜೆಪಿ ಇರುವವರೆಗೆ ಶಾಂತಿ,ನೆಮ್ಮದಿ ಇರಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇಂದಿರಾ ಗಾಂಧಿ ಭವನದಲ್ಲಿ ರಾಜೀವ್ ಗಾಂಧಿ ಅವರ 32ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು. ರಾಜೀವ್ ಗಾಂಧಿ ದಾರಿಯಲ್ಲಿ ನಡೆಯುವ ಪ್ರಯತ್ನ ಮಾಡೋಣ. ಮೋದಿ ಭಯೋತ್ಪಾದನೆ ತೊಲಗಬೇಕು ಎಂದು ಹೇಳುತ್ತಾರೆ. ಮೊದಲೇ ಕಾಂಗ್ರೆಸ್ ಈ ವಿಚಾರವಾಗಿ ಹೋರಾಟ ಮಾಡಿತ್ತು.
ಭಯೋತ್ಪಾದನೆಗೆ, ಖಲಿಸ್ತಾನ ಉಗ್ರರಿಗೆ ಇಂದಿರಾ ಗಾಂಧಿ ಬಲಿಯಾಗಿದ್ದಾರೆ ಎಂದಿದ್ದಾರೆ. ಬ್ರಿಟಿಷ್ ಓಡಿಸಿ ಸ್ವತಂತ್ರ ಕೊಡಿಸಿದ್ದು, ಕಾಂಗ್ರೆಸ್ ಪಕ್ಷವಾಗಿದೆ. ಸ್ವತಂತ್ರ ಬೆಲೆ ಕಾಂಗ್ರೆಸ್ ಪಕ್ಷಕ್ಕೆ ಗೊತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸಲು ಕಾಂಗ್ರೆಸ್ ಕಾರಣ. ನೆಹರು ಪ್ರಜಾಪ್ರಭುತ್ವ ಬುನಾದಿ ಹಾಕಿದ್ದಾರೆ. ಆದರೆ ನರೇಂದ್ರ ಮೋದಿ ಅಂತಹ ನಾಟಕಾರ ಎಲ್ಲಿ ಸಿಗಲ್ಲ. ಮಾತಿಗೆ ಮಾತ್ರ ಸಭ್ ಕಾ ಸಥ್ ಎನ್ನುತ್ತಾರೆ.
ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ. ಬಿಜೆಪಿಯವರು ಯಾರು ಕೂಡ ಸ್ವತಂತ್ರ ಹೋರಾಟದಲ್ಲಿ ಸತ್ತಿಲ್ಲ. ಎಲ್ಲಿಯವರೆಗೆ ಬಿಜೆಪಿ ಇರುವವರೆಗೆ ಶಾಂತಿ,ನೆಮ್ಮದಿ ಇರಲ್ಲ. ಜಾತಿ, ಧರ್ಮದ ಹೆಸರಲ್ಲಿ ಸಮಾಜ ಒಡೆಯುತ್ತಿದ್ದಾರೆ ಇಡಿ ದೇಶದಲ್ಲಿ ಶಾಂತಿ ನೆಲಸಬೇಕು ಎಂದು ಬಿಜಿಪಿ ಪಕ್ಷದ ವಿರುದ್ಧವಾಗಿ ಕಿಡಿಕಾರಿದ್ದಾರೆ.