ಕಲಬುರಗಿ: ಹೆಡ್ ಕ್ವಾರ್ಟರ್ಸ್ನಲ್ಲಿ ನೇಣು ಬಿಗಿದುಕೊಂಡು ಹೆಡ್ ಕಾನ್ಸಟೇಬಲ್ ಆತ್ಮಹತ್ಯೆ(Head Constable Suicide) ಮಾಡಿಕೊಂಡ ಘಟನೆ ನಗರದ ಡಿಎಆರ್(DAR) ನಲ್ಲಿ ನಡೆದಿದೆ. ಪಾಂಡುರಂಗ (47) ಆತ್ಮಹತ್ಯೆಗೆ ಶರಣಾದ ಮೃತ ರ್ದುದೈವಿ. ಚಿಂಚೋಳಿ ಜಿಲ್ಲೆಯ ಚಿಮ್ಮನ ತಾಲ್ಲೂಕಿನ ಚೋಡ್ (Chincholi) ಗ್ರಾಮದ ನಿವಾಸಿಯಾಗಿದ್ದ ಪಾಂಡುರಂಗ ಅವರು ಕಲಬುರಗಿ ನಗರದ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸಟೇಬಲ್ ಕೆಲಸ ನಿರ್ವಹಿಸುತ್ತಿದ್ದರು. ನಿನ್ನೆ ರಾತ್ರಿ 10 ಗಂಟೆಗೆ ಕೆಲಸ ಮುಗಿಸಿ ಮನೆಗೆ ತೆರಳಿದ್ದರು.
ಮನೆಯಲ್ಲಿ ಶಕೆ ಇದೆ ಎಂದು ಇಬ್ಬರು ಮಕ್ಕಳು ಮನೆಯ ಮೇಲ್ಚಾವಣಿಯಲ್ಲಿ ಮಲಗಿದ್ದು, ಗಂಡ ಹೆಂಡತಿ ಇಬ್ಬರು ಕ್ವಾಟರ್ಸ್ನ ಬೆಡ್ ರೂಮ್ನಲ್ಲಿ ಮಲಗಿದ್ದರು. ನಸುಕಿನ ಜಾವ ಮನೆಯ ಅಡುಗೆ ಕೊಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು. ಈ ಕುರಿತು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬರದ ಕಾರಣ ತನಿಖೆ ಮುಂದುವರೆದಿದೆ.