ಹಿರೋಷಿಮಾ: ಜಿ7 ಶೃಂಗಸಭೆಯಲ್ಲಿ ಭಾಗವಹಿಸಲು ಜಪಾನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಹಿರೋಷಿಮಾ ಶಾಂತಿ ಸ್ಮಾರಕ ಉದ್ಯಾನಕ್ಕೆ ಭೇಟಿ ನೀಡಿ ಪುಷ್ಟ ನಮನ ಸಲ್ಲಿಸಿದರು.
ಎರಡನೇ ಮಹಾಯುದ್ಧ ಸಂದರ್ಭದಲ್ಲಿ ಪರಮಾಣು ದಾಳಿಗೆ ಬಲಿಯಾದವರ ನೆನಪಿಗಾಗಿ ಹಿರೋಷಿಮಾದಲ್ಲಿ ಶಾಂತಿ ಸ್ಮಾರಕ ನಿರ್ಮಿಸಲಾಗಿದೆ. ಇದೀಗ ಶಾಂತಿ ಸ್ಮಾರಕ ಉದ್ಯಾನಕ್ಕೆ ಭೇಟಿ ನೀಡಿ ಪುಷ್ಟ ನಮನ ಸಲ್ಲಿಸಿದ್ದಾರೆ.
ಜಿ7 ಶೃಂಗದಲ್ಲಿ ಭಾಗವಹಿಸಿದ ಇತರ ದೇಶಗಳ ನಾಯಕರು ಶಾಂತಿ ಸ್ಮಾರಕಕ್ಕೆ ಗೌರವ ಸೂಚಿಸಿದ್ದಾರೆ. ಶಾಂತಿ ಸ್ಮಾರಕಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರ ಪೋಟೋಗಳನ್ನು ಟ್ವೀಟ್ ಮಾಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, ‘ ಪ್ರಧಾನಿ ನರೇಂದ್ರ ಮೋದಿ ಅವರು ಹಿರೋಷಿಮಾ ಶಾಂತಿ ಸ್ಮಾರಕ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿ ತಮ್ಮ ದಿನವನ್ನು ಪ್ರಾರಂಭಿಸಿದ್ದಾರೆ. ಹಿರೋಷಿಮಾ ಸಂತ್ರಸ್ತರಿಗೆ ಪ್ರಧಾನಿ ಅವರು ಗೌರವ ಸೂಚಿಸಿದ್ದಾರೆ. ಮ್ಯೂಸಿಯಂನಲ್ಲಿರುವ ದಾಖಲಾತಿಗಳನ್ನು ವೀಕ್ಷಿಸಿದರು. ಸಂದರ್ಶಕರ ಪುಸ್ತಕದಲ್ಲಿ ಪ್ರಧಾನಿ ಅವರು ಸಹಿ ಮಾಡಿದ್ದಾರೆ’ ಎಂದು ಬರೆದುಕೊಂಡಿದ್ದಾರೆ.
ಮೇ 19ರಿಂದ 21ರವರೆಗೆ ಜಪಾನ್ನ ಹಿರೋಷಿಮಾದಲ್ಲಿ ನಡೆದ ಶೃಂಗಸಭೆಯಲ್ಲಿ ಇಂಗ್ಲೆಂಡ್, ಅಮೆರಿಕ, ಜಪಾನ್, ಭಾರತ, ಫ್ರಾನ್ಸ್ , ಜರ್ಮನಿ, ಕೆನಡಾ, ಇಟಲಿ ದೇಶದ ನಾಯಕರುಗಳು ಭಾಗವಹಿಸಿದ್ದರು. ಸಭೆಯಲ್ಲಿ ಆಹಾರ, ರಸಗೊಬ್ಬರ, ಇಂಧನ ಭದ್ರತೆ ಸೇರಿದಂತೆ ಜಾಗತಿಕವಾಗಿ ಎದರಿಸುತ್ತಿರುವ ಸವಾಲುಗಳ ಬಗ್ಗೆ ಚರ್ಚಿಸಲಾಗಿದೆ.