ಬೆಂಗಳೂರು: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ರಣ ಮಳೆ ಸಿಲಿಕಾನ್ ಸಿಟಿಯಲ್ಲಿ ಭಾರೀ ಅವಾಂತರಗಳನ್ನು ಸೃಷ್ಟಿಸಿದೆ(Bengaluru Rain). ಎರಡು ಅಮಾಯಕ ಜೀವಗಳು ಬಲಿಯಾಗಿವೆ. ಇನ್ನು 2 ಸಾವಿನ ಬಳಿಕ ಬುದ್ದಿ ಕಲಿತ ಬಿಬಿಎಂಪಿ(BBMP) IISC ತಜ್ಞರ ಮೊರೆ ಹೋಗಿದೆ. ಬಿಬಿಎಂಪಿಯ 18 ಅಂಡರ್ ಪಾಸ್ಗಳ ಕಾರ್ಯಕ್ಷಮತೆ ಬಗ್ಗೆ ವರದಿ ನೀಡಲು ತಜ್ಞರಿಗೆ ಸೂಚಿಸಿದೆ. ಹಾಗೂ ಅಂಡರ್ಪಾಸ್ಗಳಲ್ಲಿ ಕೆಲವು ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ.
ಅಂಡರ್ಪಾಸ್ಗಳಲ್ಲಿ ಬಿಬಿಎಂಪಿ ತೆಗೆದುಕೊಳ್ಳಲು ಉದ್ದೇಶಿಸಲಾಗಿರುವ ಪ್ರಮುಖ ಕ್ರಮಗಳು
1 – ರಸ್ತೆಯ ಅಕ್ಕ ಪಕ್ಕದಲ್ಲಿ ಬೀಳುವ ಎಲ್ಲಾ ಮಳೆ ನೀರು ಕೆಳಸೇತುವೆಗೆ ಹೋಗದಂತೆ ಕೆಳಸೇತುವೆಯ ಏರುವ ಮತ್ತು ಇಳಿಯುವ ರಾಂಪ್ ಮುಂಭಾಗದಲ್ಲಿ ಪ್ರತ್ಯೇಕ ಚರಂಡಿಯನ್ನು ನಿರ್ಮಿಸಿ ನೇರವಾಗಿ ರಾಜಕಾಲುವೆಗೆ ಸಂಪರ್ಕ ಕಲ್ಪಿಸುವುದು
2 – ರಸ್ತೆಯ ಮೇಲೆ ಭಾಗದ ಮಳೆ ನೀರು ಕೆಳಸೇತುವೆಗೆ ಹೋಗದಂತೆ ರಾಂಪ್ ಮುಂಭಾಗದಲ್ಲಿ ಪ್ರತ್ಯೇಕವಾಗಿ ಚರಂಡಿಯನ್ನು ನಿರ್ಮಿಸುವ ಜೊತೆಗೆ ಒಂದು ರಸ್ತೆ ಉಬ್ಬರವನ್ನು ಸಹ ನಿರ್ಮಿಸುವುದು
3- ಕೆಳಸೇತುವೆಯ ಕೆಳಭಾಗದಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಗಳನ್ನು ಅಳವಡಿಸುವುದು
4- Vertical Clearance Gauge Beam ಅನ್ನು ಆಳವಡಿಸಿ ಅತೀ ಪ್ರವಾಹ ಉಂಟಾದ ತುರ್ತು ಸಂಧರ್ಭಗಳಲ್ಲಿ ಒಂದು Boom Barrier ಅನ್ನು ಸಹ ನಿರ್ಮಿಸುವುದು ಅಗತ್ಯ ಸಂದರ್ಭದಲ್ಲಿ ಬಳಸುವುದು
5- ಕೆಳಸೇತುವೆಯ ವಾಹನ ನಿರ್ಬಂಧ ಪಡಿಸುವ ಕ್ರಮವನ್ನು ಸಂಚಾರ ಪೋಲಿಸ್ ಇಲಾಖೆಯ ಸಹಯೋಗದಿಂದ ನಿರ್ವಹಣೆ ಮಾಡುವುದು
15 ದಿನಗಳಲ್ಲಿ ಎಲ್ಲ ಕ್ರಮಗಳನ್ನುಪೂರ್ಣಗೊಳಿಸಲು ಆದೇಶ