ಗದಗ: ಕಪ್ಪತಗುಡ್ಡ ವನ್ಯಜೀವಿಧಾಮ ಪ್ರದೇಶದ ಅಂಚಿನಲ್ಲಿರುವ ಶೆಟ್ಟಿಕೆರೆ ಪ್ರದೇಶದಲ್ಲಿ ನಕ್ಷತ್ರಾಕಾರದ ಕೂರ್ಮ ಪ್ರತ್ಯಕ್ಷ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಶೆಟ್ಟಿಕೆರೆ ಪ್ರದೇಶ ವ್ಯಾಪ್ತಿಯಲ್ಲಿ ಟೆಸ್ಟುಡಿನಿಡೆ ಕುಟುಂಬಕ್ಕೆ ಸೇರಿದ ನಕ್ಷತ್ರ ಆಮೆ ಅರಣ್ಯ ಇಲಾಖೆಯ ಸಿಬ್ಬಂದಿಗೆ ಪ್ರತ್ಯಕ್ಷವಾಗಿರೋ ವಿಶೇಷ ತಳಿಯ ಆಮೆ ಇದರ ವೈಜ್ಞಾನಿಕ ಹೆಸರು ಜಿಯೋಚಲೋನ್ ಎಲಗನ್ಸ್ ಅವಾಸ ಸ್ಥಾನ ನಾಶ ಮತ್ತು ಕಳ್ಳಬೇಟೆಯಿಂದಾಗಿ ಅಳಿವಿನಂಚಿನಲ್ಲಿರುವ ಆಮೆ 10 ಇಂಚಿನವರೆಗೂ ಉದ್ದದಷ್ಟು ಬೆಳೆಯುವ ನಕ್ಷತ್ರ ಆಮೆ ದೇಹದ ಮೇಲೆ ನಕ್ಷತ್ರ ಆಕಾರದ ಗಾಢವಾದ ಬಣ್ಣದ ವಿನ್ಯಾಸ.
ಇವುಗಳನ್ನ ಮನೆಯಲ್ಲಿ ಸಾಕಿದರೆ ಮನೆಯಲ್ಲಿ ಸಂಪತ್ತು ವೃದ್ಧಿ ಎಂಬ ನಂಬಿಕೆ.ಆದ್ರೆ ಮನೆಯಲ್ಲಿ ಸಾಕಿದರೆ ಬಹಳಷ್ಟು ದಿನ ಇದು ಬದಕೋದಿಲ್ಲ.ಕೆಲವರು ಚಿಪ್ಪು ಮತ್ತು ಅದರ ಮಾಂಸಕ್ಕಾಗಿ ಕಳ್ಳಭೇಟೆಯಾಡ್ತಾರೆ.ಹೀಗಾಗಿ ಈ ಪ್ರಾಣಿ ಅಳಿವಿನಂಚಿನಲ್ಲಿರುವುದು ಎಂಬ ಅರಣ್ಯ ಇಲಾಖೆಯ ಮಾಹಿತಿ ಇಂದು ವಿಶ್ವ ಆಮೆ ದಿನ ಹೀಗಾಗಿ ಅದರ ಬಗ್ಗೆ ಜಾಗೃತಿ ಮೂಡಿಸಿ ರಕ್ಷಣೆ ಮಾಡುವ ಜವಾಬ್ದಾರಿ ಎಲ್ಲರದು ಎಂಬ ಅಭಿಪ್ರಾಯ ಅರಣ್ಯ ಇಲಾಖೆಯದು