ಬೆಂಗಳೂರು: ಸಿದ್ದರಾಮಯ್ಯ ಸಿಎಂ ಆಗಿ ಇನ್ನೂ ನಾಲ್ಕು ದಿನ ಕಳೆದಿಲ್ಲ.. ಆಗಲೇ ಮುಖ್ಯಮಂತ್ರಿ ಕುರ್ಚಿ ವಿಚಾರವಾಗಿ ರಂಪಾಟ ಜೋರಾಗಿಬಿಟ್ಟಿದೆ. ಸಿದ್ದರಾಮಯ್ಯನವ್ರು ಐದು ವರ್ಷವೂ ಸಿಎಂ ಆಗಿರ್ತಾರೆ ಎಂಬ ಒಂದೇ ಒಂದು ಹೇಳಿಕೆ, ಡಿ.ಕೆ. ಶಿವಕುಮಾರ್ ಆಪ್ತ ಬಣವನ್ನ ರೊಚ್ಚಿಗೆಬ್ಬಿಸಿದೆ. ಕೆಲವರು ಬಹಿರಂಗವಾಗಿಯೇ ತೊಡೆ ತಟ್ಟುತ್ತಿದ್ರೆ, ಇನ್ನೂ ಕೆಲವರು ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿದ್ದಾರೆ.
ಬೂದಿ ಮುಚ್ಚಿದ ಕೆಂಡದಂತಿದ್ದ ಕಾಂಗ್ರೆಸ್ ಸಿಎಂ ಕುರ್ಚಿ ಕಿತ್ತಾಟ, ಈಗ ಹೊತ್ತಿಕೊಂಡಂತೆ ಕಾಣ್ತಿದೆ. ಸಿಎಂ ಕುರ್ಚಿ ಮೇಲೆ ಕಣ್ಣಾಕಿದ್ದ ಡಿ.ಕೆ. ಶಿವಕುಮಾರ್ ಗೆ, ಸಿದ್ದು ಆಪ್ತ ಬಣ ಟಕ್ಕರ್ ಕೊಟ್ಟಿತ್ತು. ಆಗಿನಿಂದ ಇಬ್ಬರ ನಡುವಿನ ಬಣ ಎಸ್ ರಾಜಕೀಯ ತಾರಕಕ್ಕೇರಿಬಿಟ್ಟಿದೆ. ಹೈಕಮಾಂಡ್ ಹಂತದಲ್ಲಿ ಅಧಿಕಾರ ಹಂಚಿಕೆ ಮಾತಾಗಿದೆ. ಎರಡೂವರೆ ವರ್ಷ ಆದ್ಮೇಲೆ ಡಿ.ಕೆ ಶಿವಕುಮಾರ್ ಸಿಎಂ ಆಗ್ತಾರೆ ಅಂತಾ ಕಾಲರ್ ಎಗರಾಕಿಕೊಂಡು ಮಾತಾಡ್ತಿದ್ದ ಡಿಕೆಶಿ ಆಪ್ತರಿಗೆ, ಸಿದ್ದು ಟೀಂ ಸಿಡಿಲಿನಂತ ಮಾತಿನೇಟು ಕೊಟ್ಟಿದೆ.
ಐದು ವರ್ಷವೂ ಸಿದ್ದರಾಮಯ್ಯನವ್ರೇ ಸಿಎಂ ಆಗಿರ್ತಾರೆ. ಹೈಕಮಾಂಡ್ ನಾಯಕರೂ ನಮಗೆ ಇದನ್ನೇ ಹೇಳಿದ್ದಾರೆ ಅಂತಾ ಸಚಿವ ಎಂ.ಬಿ ಪಾಟೀಲ್ ಮತ್ತೊಮ್ಮೆ ಸ್ಪೋಟಕ ಹೇಳಿಕೆ ಕೊಟ್ಟಿದ್ದಾರೆ. ಈ ಹೇಳಿಕೆ ಕಾಂಗ್ರೆಸ್ ನಲ್ಲಿ ಕಿಚ್ಚು ಎಬ್ಬಿಸಿಬಿಟ್ಟಿದೆ. ಆದಾಗ್ಯೂ ಹೈಕಮಾಂಡ್ ಹೇಳಿದ್ದನ್ನೇ ನಾನು ಹೇಳಿದ್ದೇನೆ ಅಂತಾ ಎಂ.ಬಿ ಪಾಟೀಲ್ ಟಕ್ಕರ್ ಮೇಲೆ ಟಕ್ಕರ್ ಕೊಟ್ಟಿದ್ದಾರೆ.
ಇನ್ನು ಎಂ.ಬಿ ಪಾಟೀಲ್ ನೀಡಿರೋ ಈ ಒಂದೇ ಒಂದು ಹೇಳಿಕೆ ಡಿ.ಕೆ ಬ್ರದರ್ಸ್ ರೊಚ್ಚಿಗೇಳುವಂತೆ ಮಾಡಿದೆ. ನಾನು ಎಂಬಿ ಪಾಟೀಲ್ ಗೆ ತೀಕ್ಷ್ಣವಾದ ಎಚ್ಚರಿಕೆ ಕೊಡಬಲ್ಲೆ. ಆದರೆ ಈಗ ಅದು ಬೇಡ. ಹೆಚ್ಚಿನ ಮಾಹಿತಿ ಬೇಕಾದ್ರೆ ಸುರ್ಜೇವಾಲಾರನ್ನ ಕೇಳಿ. ಈಗ ಇದೆಲ್ಲಾ ಬೇಡ ಅಂತಾ ಎಂ. ಬಿ ಪಾಟೀಲ್ ಗೆ ಹೇಳಿ ಅಂತಾ ನೇರ ಎಚ್ಚರಿಕೆ ಕೊಟ್ರು..
ಇನ್ನು ಎಂ.ಬಿ ಪಾಟೀಲ್ ಹೇಳಿಕೆಗೆ ಡಿ.ಕೆ.ಶಿವಕುಮಾರ್ ಕೂಡ ಕೌಂಟರ್ ಕೊಟ್ರು. ಯಾರು ಏನೇ ಹೇಳಿಕೆ ಕೊಡಲಿ.. ಎಐಸಿಸಿ ಸಮಿತಿ ಇದೆ, ಎಐಸಿಸಿ ಅಧ್ಯಕ್ಷರಿದ್ದಾರೆ ನೋಡ್ಕೋತಾರೆ ಅಂತಾ ಶಿಸ್ತುಕ್ರಮ ಜರುಗಿಸೋ ಬಗ್ಗೆ ಪರೋಕ್ಷವಾಗಿ ವಾರ್ನಿಂಗ್ ಕೊಟ್ರು.
ಪವರ್ ಶೇರಿಂಗ್ ಬಗ್ಗೆ ಏನು ಚರ್ಚೆ ಆಗಿದೆ ಅಂತಾ ವರಿಷ್ಠರಿಗೆ ಗೊತ್ತು, ನಮಗೆ ಗೊತ್ತಿಲ್ಲ ಅಂತಾ ಪ್ರಿಯಾಂಕ್ ಖರ್ಗೆ ಹೇಳಿದ್ರೆ, 2013 ರಲ್ಲಿ ಈ ಬಗ್ಗೆ ಚರ್ಚೆ ಆಯ್ತಾ..? ಈಗ ಈ ಚರ್ಚೆ ಏಕೆ? ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿರಲೆಂದು ಮಾಡಿದ ದಿನೇಶ್ ಗುಂಡೂರಾವ್ ಬ್ಯಾಟಿಂಗ್ ಮಾಡಿದ್ರು..
ಈ ಮಧ್ಯೆ ಎಂ. ಬಿ. ಪಾಟೀಲ್ ಹೇಳಿಕೆಯನ್ನ ಉಲ್ಲೇಖಿಸಿ ಡಿ.ಕೆ ಶಿವಕುಮಾರ್ ಅವ್ರನ್ನ ಬಿಜೆಪಿ ಕಿಚಾಯಿಸಿದೆ. ಡಿ.ಕೆ. ಶಿವಕುಮಾರ್ ಅವರು ಸಿಎಂ ಆಗುವುದಿಲ್ಲ, ಸಿಎಂ ಆಗಲು ಸಿದ್ದರಾಮಯ್ಯನವರು ಬಿಡುವುದೂ ಇಲ್ಲ.. ಈ ಸರಕಾರ ಸುಸ್ತಿರವಾಗಿರಲಿದೆ ಎಂಬ ಯಾವ ಲಕ್ಷಣವೂ ಕಾಣುತ್ತಿಲ್ಲ, ಗ್ಯಾರಂಟಿಯೂ ಇಲ್ಲ ಅಂತಾ ರಾಜ್ಯ ಬಿಜೆಪಿ ಟ್ವೀಟ್ ಮಾಡಿ ಟಾಂಗ್ ನೀಡಿದೆ.
ಒಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ನಡುವೆ ನಡೀತಿರೋ ಜಟಾಪಟಿಯಿಂದ ಇಡೀ ಕಾಂಗ್ರೆಸ್ ಪಾಳಯವೇ ತಲೆಕೆಳಗಾದಂತೆ ಕೂತಿದೆ. ಎಂ.ಬಿ ಪಾಟೀಲ್ ಹೇಳಿಕೆಯಂತೂ ಡಿ.ಕೆ ಶಿವಕುಮಾರ್ ಹಾಗೂ ಬೆಂಬಲಿಗರನ್ನ ಸಿಡಿದೇಳುವಂತೆ ಮಾಡಿದೆ. ಮುಂದಿನ ದಿನಗಳಲ್ಲಿ ಬೆಂಬಲಿಗರ ನಡುವಿನ ವಾಕ್ಸಮರ ಮತ್ತೊಂದು ಹಂತಕ್ಕೆ ತಲುಪುವುದರಲ್ಲಿ ಅನುಮಾನವೇ ಇಲ್ಲ.