ರಾಮನಗರ: ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್ಸಿ) 2022ನೇ ಸಾಲಿನ ಅಖಿಲ ಭಾರತ ನಾಗರಿಕ ಸೇವಾ ಪರೀಕ್ಷೆಯ (ಸಿಎಸ್ಇ) ಫಲಿತಾಂಶ ಪ್ರಕಟವಾಗಿದ್ದು, ಒಟ್ಟು 933 ಅಭ್ಯರ್ಥಿಗಳು ವಿವಿಧ ಹುದ್ದೆಗಳಿಗೆ ಅರ್ಹತೆ ಪಡೆದಿದ್ದಾರೆ. ಅಗ್ರ ನಾಲ್ಕು ಸ್ಥಾನಗಳನ್ನು ಮಹಿಳೆಯರೇ ಪಡೆದಿದ್ದು, ಕರ್ನಾಟಕದ ಟಾಪರ್ ಕೂಡ ಮಹಿಳೆಯೇ ಆಗಿದ್ದಾರೆ. ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಯುವತಿ ದಾಮಿನಿ ಎಂ.ದಾಸ್,
ಯುಪಿಎಸ್ಸಿ ಪರೀಕ್ಷೆ ಪಾಸ್ ಮಾಡಿದ ತಾಲೂಕಿನ ಮೊದಲ ಯುವತಿ ಎಂಬ ಗೌರವಕ್ಕೂ ಪಾತ್ರರಾಗಿದ್ದಾರೆ. ರೈತಾಪಿ ಕುಟುಂಬದ ಧಾಮಿನಿ ಎಂ. ದಾಸ್ ಗೆ 345ನೇ ರ್ಯಾಂಕ್ ಪಡೆದಿದ್ದಾರೆ. ಮಳೂರುಪಟ್ಟಣ ಗ್ರಾಮದ ಶೈಲಜಾ ಹಾಗೂ ಮೋಹನ್ ದಾಸ್ ದಂಪತಿ ಪುತ್ರಿಯಾದ ದಾಮಿನಿ, ಇಂಜಿನಿಯರ್ ಪದವೀಧರೆ. ಆನ್ಲೈನ್ ತರಬೇತಿಯ ಮೂಲಕವೇ ಈ ಸಾಧನೆ ಮಾಡಿರುವುದು ವಿಶೇಷ. ದಾಮಿನಿ ಅವರ ತಂದೆ ಮೋಹನ್ದಾಸ್ ಕೃಷಿಕರು ಆಗಿದ್ದಾರೆ.