ಬೆಂಗಳೂರು: ಪರಪ್ಪನ ಅಗ್ರಹಾರ(Parappana Agrahara Jail) ಜೈಲಿನಿಂದ 81 ಕೈದಿಗಳಿಗೆ ಬಿಡುಗಡೆ ಭಾಗ್ಯ ಸಿಕ್ಕಿದೆ. ರಾಜ್ಯ ಸರ್ಕಾರ ಸನ್ನಡತೆ ಮೇಲೆ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ 81 ಕೈದಿಗಳನ್ನು ಜೈಲಿನಿಂದ ಬಿಡುಗಡೆ ಮಾಡಿದೆ. 214 ಕೈದಿಗಳ ಬಿಡುಗಡೆಗೆ ರಾಜ್ಯ ಸರ್ಕಾರ ಆದೇಶ ನೀಡಿತ್ತು. ಆದ್ರೆ ಮಂಗಳವಾರ(ಮೇ 23) ಇಬ್ಬರು ಮಹಿಳಾ ಕೈದಿಗಳು ಸೇರಿದಂತೆ 81 ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ. ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ತಮ್ಮವರು ಶಿಕ್ಷೆಯಿಂದ ಬಿಡುಗಡೆಯಾಗಿ ವಾಪಾಸಾಗು ತ್ತಿರುವುದು ತಿಳಿದ ಬಳಿಕ ಕುಟುಂಬಸ್ಥರು ಕಾರಾಗೃಹದ ಬಳಿ ಬಂದು ಸ್ವಾಗತಿಸಿದರು. ಬಿಡುಗಡೆ ಆಗ್ತಾ ಇದ್ದಂತೆ ಕುಟುಂಬಸ್ಥರನ್ನು ತಬ್ಬಿ ಬಿಡುಗಡೆಗೊಂಡ ಕೈದಿಗಳು ಕಣ್ಣೀರು ಹಾಕಿದರು.
ಜೈಲಿನ ಅಧಿಕಾರಿಗಳು ಬಿಡುಗಡೆ ಪ್ರಮಾಣ ಪತ್ರ ನೀಡಿ ಕಳುಹಿಸಿದ್ದಾರೆ. ಮತ್ತೆ ಅಪರಾಧ ಕೃತ್ಯದಲ್ಲಿ ಭಾಗಿಯಾಗಲ್ಲ ಎಂದು ಕೈದಿಗಳು ಬರೆದುಕೊಟ್ಟಿದ್ದಾರೆ. ಹಾಗೂ ಕೆಟ್ಟ ವ್ಯಕ್ತಿಗಳ ಜೊತೆ ಸೇರಲ್ಲ ಎಂದು ಸಹಿ ಹಾಕಿ ಮನೆಗಳ ಕಡೆ ತೆರಳಿದ್ದಾರೆ. ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದ್ದಾಗ ತೆಗೆದುಕೊಳ್ಳಲಾಗಿದ್ದ ಬಿಡುಗಡೆ ನಿರ್ಣಯವನ್ನು ಸೋಮವಾರ ರಾಜ್ಯಪಾಲರ ಅಂಕಿತ ನಂತರ ಬಿಡುಗಡೆ ಭಾಗ್ಯ ಸಿಕ್ಕಿದೆ. ಇನ್ನು ಉತ್ತಮ ಸನ್ನಡತೆ ಇರೋ ಒಟ್ಟು 214 ಕೈದಿಗಳ ಬಿಡುಗಡೆಗೆ ಸ್ಥಾಯಿ ಸಮಿತಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.