ಬೆಂಗಳೂರು: ಪೊಲೀಸರು ಎಫ್ಐಆರ್(FIR) ಹಾಕಿ ನನ್ನನ್ನು ಎ೧ ಮಾಡಿದ್ದಾರೆ. ನಾನು ಕದ್ದುಮುಚ್ಚಿ ಓಡಾಡುವಂತಾಗಿತ್ತು ಎಂದು ಕೆಜಿಎಫ್ ಶಾಸಕಿ ರೂಪಾ ಶಶಿಧರ್(Rupa Sashidhar) ಅವರು ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಬಳಿ ಕಷ್ಟ ಹೇಳಿಕೊಂಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಹೊಸ ಸರ್ಕಾರವನ್ನು ರಚಿಸಿದೆ. ಕಾಂಗ್ರೆಸ್ ಪಕ್ಷದ ಶಾಸಕಾಂಗ ಪಕ್ಷದ ಸಭೆ ನಡೆಸಿ ಪಕ್ಷದ ಬಲವರ್ಧನೆ ಮಾಡಬೇಕಾದ ಯೋಜನೆ ಹಾಗೂ ಹಲವು ವಿಚಾರಗಳ ಕುರಿತಾಗಿ ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ವಿಧಾನಸೌಧದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ (ಸಿಎಲ್ಪಿ) ಸಭೆ ಮುಗಿಸಿ ಬೇರೆ ಶಾಸಕರು ಹೊರಡುವಾಗ,
ಡಿಸಿಎಂ ಡಿ. ಕೆ ಶಿವಕುಮಾರ್ ಅವರು ಮಾತ್ರ ಅಲ್ಲೇ ಕುಳಿತಿದ್ದರು. ಈ ವೇಳೆ ಅವರ ಡಿಕೆಶಿ ಅವರ ಬಳಿ ಕೋಲಾರ (ಕೆಜಿಎಫ್) ಶಾಸಕಿ ರೂಪಾ ಶಶಿಧರ್ ಕಷ್ಟವನ್ನು ಹೇಳಿಕೊಂಡಿದ್ದಾರೆ. ಕಾರ್ಮಿಕರಿಗೆ ಫುಡ್ ಕಿಟ್ ಕೊಟ್ಟಿದ್ದಕ್ಕೆ ಪೊಲೀಸರು ಎಫ್ಐಆರ್ ಹಾಕಿ ನನ್ನನ್ನು ಎ೧ ಮಾಡಿದ್ದಾರೆ. ನಾನು ಕದ್ದುಮುಚ್ಚಿ ಓಡಾಡುವಂತಾಗಿತ್ತು. ಚುನಾವಣಾ ಅಧಿಕಾರಿಗಳ ಮಾತು ಕೇಳಿಕೊಂಡು. ಪೊಲೀಸರು ತುಂಬಾ ಹರಾಸ್ ಮೆಂಟ್ ಮಾಡಿದ್ದಾರೆ ಎಂದು ಡಿಕೆಶಿ ಬಳಿ ಹೇಳಿಕೊಂಡು ಶಾಸಕಿ ರೂಪಾ ಶಶಿಧರ್ ದುಃಖಿತರಾಗಿದ್ದಾರೆ.