ಪೊಲೀಸರು ಕೇಸರಿ ಶಾಲು ಹಾಕಿದ್ದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಎಚ್ಚರಿಕೆ ವಿಚಾರಕ್ಕೆ ಸಂಬಂಧಿಸಿ ಬೆಂಗಳೂರಿನಲ್ಲಿ ನೂತನ ಸಚಿವ ಪ್ರಿಯಾಂಕ್ ಖರ್ಗೆ ಸಮರ್ಥನೆ ಮಾಡಿಕೊಂಡಿದ್ದಾರೆ. ಈ ಹಿಂದೆ ಇದ್ದ ಗೃಹ ಸಚಿವರ ಮನೆಗೆ ಮುತ್ತಿಗೆ ಹಾಕಿದ್ದರು. ನಳಿನ್ ಕುಮಾರ್ ಕಟೀಲು ವಾಹನವನ್ನು ಹೋಗಲು ಬಿಟ್ಟಿರಲಿಲ್ಲ.
ಇಡೀ ಪೊಲೀಸ್ ಇಲಾಖೆಯನ್ನೇ ಕೇಸರೀಕರಣ ಮಾಡಲಾಗಿತ್ತು. ಯಾವ ಮಟ್ಟಕ್ಕೆ ಇದೆ ಅಂದ್ರೆ ಪೊಲೀಸರೇ ಕೇಸರಿ ಶಾಲು ಹಾಕಿದ್ರು. ಸರ್ಕಾರಿ ಕೆಲಸ ಮಾಡ್ತಿದ್ರಾ ಅಥವಾ RSSನಲ್ಲಿ ಕೆಲಸ ಮಾಡ್ತಿದ್ರಾ? ಹೀಗಾಗಿ ನಿನ್ನೆ ಸರ್ಕಾರಿ ಅಧಿಕಾರಿಗಳಿಗೆ ಡಿಸಿಎಂ ಡಿಕೆ ಸೂಚಿಸಿದ್ದಾರೆ ಎಂದರು.