ಬೆಂಗಳೂರು: ರಾಜ್ಯದ ನೂತನ ಸರಕಾರದ ಸಚಿವ ಸಂಪುಟದ ಪಟ್ಟಿ ಕೊನೆಗೂ ಅಂತಿಮಗೊಂಡಿದ್ದು, ಕನಕಗಿರಿ ಕೈ ಶಾಸಕ ಶಿವರಾಜ ತಂಗಡಗಿ ಸಚಿವ ಸ್ಥಾನ ಪಡೆದುಕೊಂಡಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ ಈ ಬಾರಿ ಸಚಿವ ಸ್ಥಾನಕ್ಕಾಗಿ ತೀವ್ರ ಪೈಪೋಟಿ ಒಡ್ಡಿದ್ದರು. ಹಿರಿತನದ ಆಧಾರದಲ್ಲಿ ರಾಯರಡ್ಡಿ, ಹ್ಯಾಟ್ರಿಕ್ ಗೆಲುವು ಸಾಧಿಸಿದ್ದೇನೆ ಎಂದು ಹಿಟ್ನಾಳ್ ಹಾಗೂ ಮೂರನೇ ಬಾರಿಗೆ ಗೆಲುವು ಸಾಧಿಸಿರುವ ಜತೆಗೆ ಬೋವಿ ಸಮಾಜದಿಂದ ಸಚಿವ ಸ್ಥಾನಕ್ಕೆ ತಂಗಡಗಿ ಲಾಭಿ ನಡೆಸಿದ್ದರು. ಅಂತಿಮವಾಗಿ ಸಚಿವ ಹುದ್ದೆ ಶಿವರಾಜ ತಂಗಡಗಿ ಪಾಲಾಗಿದೆ.
ಸಚಿವರ ವಯಕ್ತಿಕ ವಿವರ
1971 ರಲ್ಲಿ ಬಾಗಲಕೋಟೆ ಜಿಲ್ಲೆಯ ಇಳಕಲ್ನಲ್ಲಿ ಸಂಗಪ್ಪ ತಂಗಡಗಿ ಹಾಗೂ ಹುಲಿಗೆಮ್ಮ ದಂಪತಿಗಳ ಮಗನಾಗಿ ಜನಿಸಿದ್ದಾರೆ. ಪತ್ನಿ ವಿದ್ಯಾ ತಂಗಡಗಿ. ಮಕ್ಕಳು ಶಶಾಂಕ್, ಕಿರಣ್ಕುಮಾರ್ ಮತ್ತು ತನುಷಾ ಸಹೋದರರು: ಐದು ಜನ, ವೆಂಕಟೇಶ ತಂಗಡಗಿ, ಶ್ರೀನಿವಾಸ ತಂಗಡಗಿ, ನಾಗರಾಜ್ ತಂಗಡಗಿ, ರವಿ ಮತ್ತು ಚಂದ್ರು ತಂಗಡಗಿ.
ವಿದ್ಯಾಭ್ಯಾಸ
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಳಕಲ್ನಲ್ಲಿ ವ್ಯಾಸಂಗ. ಪಿಯುಸಿ ಬಾಗಲಕೋಟೆಯ ಬಸವೇಶ್ವರ ವಿಜ್ಞಾನ ಕಾಲೇಜಿನಲ್ಲಿ. ಪದವಿ ಶಿಕ್ಷಣ ಇಳಕಲ್ನ ಎಸ್ವಿಎಂ ಕಾಲೇಜಿನಲ್ಲಿ ಮುಗಿಸಿದ್ದಾರೆ.
ರಾಜಕೀಯ ಜೀವನ ಪ್ರಾರಂಭ
ಪ್ರಪ್ರಥಮ ಬಾರಿಗೆ ಇಳಕಲ್ ಪುರಸಭೆಗೆ 30 ನೇ ವಾರ್ಡ್ ಸದಸ್ಯರಾಗಿ ಕಾಂಗ್ರೆಸ್ನಿಂದ ಮೊದಲ ಬಾರಿಗೆ 2001 ರಲ್ಲಿ ಆಯ್ಕೆಯಾದರು. ನಂತರ ಬಿಜೆಪಿ ಸೇರ್ಪಡೆಯಾಗಿ ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹಾಗೂ ಉಪಾಧ್ಯಕ್ಷರಾಗಿ ಪಕ್ಷ ಸಂಘಟನೆ ಮಾಡಿದರು.
2008ರಲ್ಲಿ ವಿಧಾನಸಭೆಗೆ ಸ್ಪರ್ಧೆ
2008 ರಲ್ಲಿ ಮೀಸಲು ಕ್ಷೇತ್ರವಾದ ಕೊಪ್ಪಳ ಜಿಲ್ಲೆ ಕನಕಗಿರಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಪಕ್ಷದಿಂದ ಸ್ಪರ್ಧಿಯಾಗಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಪಕ್ಷ ಬಿ ಫಾರಂ ನೀಡದ ಕಾರಣ, ಕನಕಗಿರಿ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಫರ್ಧೆ ಮಾಡಿದರು. ಗೆದ್ದ ನಂತರ ಬಿಜೆಪಿ ಸರಕಾರಕ್ಕೆ ಬೆಂಬಲ ನೀಡಿ ಮೊದಲ ಬಾರಿಗೆ ಶಾಸಕರಾದ ಕೂಡಲೇ ಮಂತ್ರಿಯಾದ ಹೆಗ್ಗಳಿಕೆ ಪಡೆದುಕೊಂಡಿದ್ದಾರೆ.
ಕಾಂಗ್ರೆಸ್ನಿಂದ ಸ್ಪರ್ಧೆ- ಸಚಿವ ಸ್ಥಾನ
2013 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ಗೆಲುವು. ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಸಂಪುಟ ದರ್ಜೆ ಸ್ಥಾನ ಪಡೆದುಕೊಂಡಿರು.