ಹುಬ್ಬಳ್ಳಿ: ಕಾಂಗ್ರೆಸ್ ನಾಯಕರು ಮುಂದೆ ಒಳ್ಳೆಯ ಸ್ಥಾನಮಾನ ನೀಡಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಜಗದೀಶ್ ಶೆಟ್ಟರ್ ಆಶಯ ವ್ಯಕ್ತಪಡಿಸಿದರು ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ಪಕ್ಷದಲ್ಲೀಗಸದ್ಯ ಒತ್ತಡ ಪರಿಸ್ಥಿತಿಯಿದೆ ಹೀಗಾಗಿ ಮುಂದೆ ಒಳ್ಳೆಯ ಸ್ಥಾನ ನೀಡುವ ಭರವಸೆ. ನಾನು ಯಾವುದೇ ಷರತ್ತು ವಿಧಿಸಿ ಕಾಂಗ್ರೆಸ್ ಸೇರಿರಲಿಲ್ಲ ಆದರೆ ನಾನು ಮಾಡಿದ ಸಂಘಟನೆ ನೋಡಿ ಹಲವಾರು ಜನ ನನಗೆ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿದ್ದರು. ಈಗ ಬೇರೆ ಬೇರೆ ಕಾರಣದಿಂದ ಸಚಿವ ಸ್ಥಾನ ನೀಡಿಲ್ಲ ಇನ್ನೂ ಸಾಕಷ್ಟು ಅವಕಾಶಯಿವೆ ಅದನ್ನು ನೀಡುತ್ತಾರೆ ಅಂತ ಭರವಸೆಯಿದೆ ಎಂದರು.
ಲೋಕಸಭಾ ಚುನಾವಣೆಗೆ ನಿಲ್ಲುವ ಚರ್ಚೆ ನಡೆದಿಲ್ಲ
ನಾನು ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಯಾವುದೇ ಚರ್ಚೆ ನಡೆದಿಲ್ಲ ಎಂದು ಜಗದೀಶ್ ಶೆಟ್ಟರ್ ಸ್ಪಷ್ಟಪಡಿಸಿದರು.ಇನ್ನೂ ಚುನಾವಣಾ ಒಂದು ವರ್ಷ ಇದೆ ನೋಡೋಣ ಮುಂದೆ ಏನ ಆಗುತ್ತದೆ ಎಂದರು ನನ್ನೊಬ್ಬನನ್ನ ಸೋಲಿಸಲು ಹೋಗಿ ಬಿಜೆಪಿ ತಾನೇ ಸೋತಿದೆ ಭಾರತೀಯ ಜನತಾ ಪಕ್ಷ ನನ್ನ ಒಬ್ಬನನ್ನೇ ಸೋಲಿಸಲು ಹೋಗಿ ಇಡೀ ಪಕ್ಷ ಸೋತಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು. ಇನ್ನು ಪಕ್ಷದಲ್ಲಿ ಯಾವರೀತಿ ಮುಂದೆ ಹೋಗಬೇಕು ಎಂಬ ಬಗ್ಗೆ ಕಾಂಗ್ರೆಸ್ ತೀರ್ಮಾನ ಮಾಡುತ್ತೆ ಕಾಂಗ್ರೆಸ್ ಗೆ ಜನ ಬೆಂಬಲ ನೀಡಿದ್ದಾರೆ ಒತ್ತಡದಲ್ಲಿ ಸ್ಥಾನಮಾನ ಕೊಡಲು ಆಗಲಿಲ್ಲ ಇನ್ನು ಕಾಂಗ್ರೆಸ್ ಯಾವ ಜವಾಬ್ದಾರಿ ನೀಡುತ್ತೆ ಅದನ್ನ ನಿಭಾಯಿಸುತ್ತೇನೆ ಉತ್ತರ ಕರ್ನಾಟಕ ಭಾಗದ ನಾಯಕರಿಗೆ ಕೆಲವು ಪ್ರಮುಖ ಸ್ಥಾನ ಸಿಕ್ಕಿವೆ ಸಾಕಷ್ಟು ಅವಕಾಶಗಳು ಉತ್ತರ ಕರ್ನಾಟಕದವರಿಗೆ ಸಿಕ್ಕಿವೆ ಮುಂದಿನ ಕ್ಯಾಬಿನೆಟ್ ನಲ್ಲಿ ಒಂದು ನಿರ್ಧಾರ ಮಾಡ್ತೇವೆ ಎಂದಿದ್ದಾರೆ ಎಂದರು.
ಇನ್ನು ಕಾಂಗ್ರೆಸ್ ನೀಡಿದಗ್ಯಾರೆಂಟಿ ಅನುಷ್ಠಾನ ಮಾಡಲು ಸ್ವಲ್ಪ ಸಮಯ ಬೇಕಾಗುತ್ತೆ ಈಗ ಅದಕ್ಕೆ ಸಮಯ ಇದೆ ಎಂದರು. ಪ್ರತಿಪಕ್ಷ ರಾಜಕೀಯವಾಗಿ ಬಳಸಿಕೊಳ್ತಾ ಇದ್ದಾರ ಹೊಸ ಸರ್ಕಾರ ಬಂದಿದೆ. ರಾಜಕಾರಣದಲ್ಲಿ ತಾಳ್ಮೆ ಬೇಕಾಗುತ್ತೆ. ಎಂ ಪಿ ಚುನಾವಣೆಗೆ ಯಾವ ರೀತಿ ತಯಾರಿ ಮಾಡಿಕೊಳ್ಳಬೇಕು ಎಂದರು. ರಾಷ್ಟಪತಿಯನ್ನು ಕರಿಯಬೇಕಿತ್ತು ಲೋಕಸಭಾ ಹೊಸ ಕಟ್ಟಡ ಉದ್ಘಾಟನೆಗೆ ರಾಷ್ಟ್ರಪತಿಗಳನ್ನ ಕರೆಯಬೇಕಾಗಿತ್ತು ಇದು ಸರಿಯಲ್ಲ.
ನಾನು ಸುವರ್ಣ ಸೌಧ ಉದ್ಘಾಟನೆ ಮಾಡುವ ಅವಕಾಶ ಬಂತು, ನಾನು ರಾಷ್ಟಪತಿ ಪ್ರಣವ್ ಮುಖರ್ಜಿ ಅವರಿಗೆ ಕರದೇದಿದ್ದೆ ರಾಷ್ಟಪತಿಗಳನ್ನು ಕರೆಯಬೇಕು ಎಂಬುದು ಸರಿಯಾಗಿದೆ ಎಂದರು. ಶೆಟ್ಟರ್ ಸೋಲಿಗೆ ಕಾರಣ ವಿಚಾರ ಇನ್ನು ತಮ್ಮ ಸೋಲಿನ ಕುರಿತು ಮಾತನಾಡಿದ ಅವರು, ಸೋಲಿಗೆ ಕಾರಣವಾದದ್ದು ಬಹಿರಂಗವಾಗಿ ಚರ್ಚೆ ಮಾಡುವುದಿಲ್ಲ
ಹಿರಿಯ ನಾಯಕರೊಂದಿಗೆ ಚರ್ಚೆ ಆಗಿಲ್ಲ ಸವದಿ ಹಾಗೂ ನನಗೂ ಸಚಿವ ಸ್ಥಾನ ಸಿಗಬೇಕಿತ್ತು ಆದರೆ ಆಗಿಲ್ಲ ಎಂದ ಅವರು ಬಿಜೆಪಿಯಲ್ಲಿ ಪಕ್ಷ ಕಟ್ಟುವಂತವರು ಯಾರಿದ್ದಾರೆ?ರಾಜ್ಯದಲ್ಲಿ ಬಿಜೆಪಿಯನ್ನು ಈ ಪರಿಸ್ಥಿತಿ ತರಲು ಕಾರಣರಾದವರು ಈಗ ಎಲ್ಲಿದ್ದಾರೆ ಇನ್ನೂ ನನ್ನ ಪ್ರಶ್ನೆಗೆ ಯಾರು ಉತ್ತರ ಕೊಟ್ಟಿಲ್ಲಅವರೆಲ್ಲರೂ ಈಗ ನಾಪತ್ತೆಯಾಗಿದ್ದು ಪರೋಕ್ಷವಾಗಿ ಬಿಎಲ್ ಸಂತೋಷಗೆ ಶೆಟ್ಟರ್ ಟಾಂಗ್ ನೀಡಿದರು. ಇನ್ನು ಭಾರತೀಯ ಜನತಾ ಪಕ್ಷದಲ್ಲಿ ಯಾವುದೇ ಸಮರ್ಥ ನಾಯಕರು ಇಲ್ಲ ವಿರೋಧ ಪಕ್ಷದ ನಾಯಕನ್ನನು ಆರಿಸಲು ಯಾರಿಲ್ಲ ರಾಷ್ಟ್ರೀಯ ಪಕ್ಷಕ್ಕೆ ಇಂತಹ ಪರಿಸ್ಥಿತಿ ಬರಬಾರದಿತ್ತು ಎಂದರು.ಆರ್ ಎಸ್ ಎಸ್ ಭಜರಂಗದಳ ಬ್ಯಾನ್ ಯಾರು ಮಾಡಿದ್ದಾರೆ ನಾನು ಕಾಂಗ್ರೆಸ್ ಸರ್ಕಾರದ ವಕ್ತಾರ ಅಲ್ಲ ಎಂದರು