ಓಕುಳಿ ಉತ್ಸವದ ಅಂಗವಾಗಿ ಗುರುವಾರ ನೀರೋಕಳಿ ಶುಕ್ರವಾರ ಮತ್ತು ಶನಿವಾರ ಹಾಲೋಕಳಿ ಅದ್ದೂರಿಯಾಗಿ ಮೂಡಿ ಬಂತು. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಶ್ರೀ ಮಾರುತೇಶ್ವರ ಓಕುಳಿ ಉತ್ಸವ ಮೂರು ದಿನಗಳಿಂದ ನಡೆಯಿತು. ಪ್ರತಿ ವರ್ಷದಂತೆ ಈ ವರ್ಷವೂ ಬಿಸಿಲಿನ ತಾಪ ಹೋಗಿ ಉತ್ತಮ ಮಳೆ ಮತ್ತು ಬೆಳೆ ಬರಲೆಂದು ದೇವರಲ್ಲಿ ಪ್ರಾರ್ಥಿಸಿದರು.
ಸಂಪ್ರದಾಯಿದಂತೆ ಪ್ರತಿದಿನ ಸಾಂಬಾಳು ಸಾಂಪ್ರದಾಯಿಕ ವಾದ್ಯ ಮೇಳದೊಂದಿಗೆ ಮುತ್ತೈದೆಯರು ಆರತಿ ಹಿಡ್ಕೊಂಡು ಪಲ್ಲಕ್ಕಿ ಉತ್ಸವದೊಂದಿಗೆ ನೀರೋಕಳಿ ಮತ್ತು ಹಾಲೋಕಳಿ ಆಡುವ ಯುವಕರನ್ನು ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಕರೆತಂದು. ನಂತರ ಓಕುಳಿ ಹೋಂಡದಲ್ಲಿ ಇರುವ ನೀರನ್ನು ಮಾರುತಿಗೆ ಸಮರ್ಥಿಸಿ ನಗರದ ಮೂರು ದಿಕ್ಕುಗಳಲ್ಲಿ ನೀರೋಕಳಿ ಮತ್ತು ಹಾಲೋಕಳಿ ಆಡುವುದರ ಮೂಲಕ ನಗರಕ್ಕೆ ತಂಪು ವಾತಾವರಣದ ಜೊತೆಗೆ ಯಾವುದೇ ಕಷ್ಟಗಳು ಬಾರದಂತೆ ಹನುಮಂತನಲ್ಲಿ ಭಕ್ತರು ಬೇಡಿಕೊಂಡರು.
ಹಾಲೋಕಳಿ ಶ್ರೀ ತುಗಲಿ ಲಕ್ಕವದೇವಿ. ಶ್ರೀ ಯಲ್ಲಮ್ಮ ದೇವಿ. ಶ್ರೀ ಗಟ್ಟಿಗಿ ಬಸವೇಶ್ವರ. ಮಹರ್ಷಿ ಶ್ರೀ ಭಗೀರಥ ತಂಡಗಳು ಭಾಗವಹಿಸಿ ನಾಲ್ಕು ತಂಡಗಳಿಗೆ ಬೆಳ್ಳಿ ಕಡೆ ನೀಡಲಾಯಿತು. ಇದೇ ಸಂದರ್ಭದಲ್ಲಿ ಪರಮಪೂಜ್ಯ ಶ್ರೀ ಸಿದ್ದರಾಮೇಶ್ವರ ಮಹಾಸ್ವಾಮಿಗಳು ವಿರಕ್ತಮಠ ರಬಕವಿ. ಪೂಜ್ಯ ಶ್ರೀ ಗುರುಸಿದ್ದೇಶ್ವರ ಮಹಾಸ್ವಾಮಿಗಳು ಬ್ರಹ್ಮಾನಂದ ಮಠ ರಬಕವಿ. ಪೂಜ್ಯ ಶ್ರೀ ಪ್ರಭುದೇವರು ಆನಂದ ಆಶ್ರಮ ರಬಕವಿ. ಡಾ ಪದ್ಮಜೀತ ನಾಡಗೌಡ ಪಾಟೀಲ. ಶಾಸಕ ಸಿದ್ದು ಸವದಿ. ದರೆಪ್ಪ ಉಳ್ಳಾಗಡ್ಡಿ. ಶ್ರೀಶೈಲ ದಲಾಲ. ಸಂಜಯ ತೆಗ್ಗಿ. ರಾಮಣ್ಣ ಹುಲಕುಂದ. ಈಶ್ವರ ನಾಗರಾಳ. ಮಲ್ಲಿಕಾರ್ಜುನ ಕೊಚನೂರ.ಮಾರುತಿ ನಾಯಕ. ಬಸಲಿಂಗಪ್ಪ ಕುಂಬಾರ. ಯಲ್ಲಪ್ಪ ಕೋಕನವರ. ಗುರುಪಾದಪ್ಪ ಬಿರಲದಿನ್ನಿ. ಬಲದೇವ ಕಟ್ಟಗಿ. ಸಿದ್ದರಾಮ ಪಾಟೀಲ. ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ