ಪ್ರಧಾನಿ ಮೋದಿ(P M Modi) ನೂತನ ಸಂಸತ್ ಭವನವನ್ನು(New Parliament hous)ಲೋಕಾರ್ಪಣೆ ಮಾಡಿದ್ದಾರೆ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳು ತುಂಬಿದ ಬೆನ್ನಲ್ಲೇ ಆಧುನಿಕ ಸ್ಪರ್ಶದೊಂದಿಗೆ ಹೊಸ ಸಂಸತ್ ಭವನ ಲೋಕಾರ್ಪಣೆಯಾಗಿದ್ದು, ಐತಿಹಾಸಿಕ ರಾಜದಂಡ ಅಥವಾ ಚಿನ್ನದ ಸೆಂಗೋಲ್(Sengol) ಅನ್ನೂ ಸಹ ಮೋದಿ ಪ್ರತಿಷ್ಠಾಪನೆ ಮಾಡಿದ್ದಾರೆ.
ಹೌದು, ಸ್ಪೀಕರ್(Speaker) ಕುರ್ಚಿ ಬಳಿ ಪ್ರಧಾನಿ ನರೇಂದ್ರ ಮೋದಿ (PM Modi)ಯವರು ಸೆಂಗೋಲ್ ಪ್ರತಿಷ್ಠಾಪನೆ ಮಾಡಿದರು. ಹೊಸ ಸಂಸತ್ ಕಟ್ಟಡದ ಉದ್ಘಾಟನೆಯ ಆರಂಭದ ಸಂದರ್ಭದಲ್ಲಿ ಪ್ರಧಾನಿ ಮೋದಿ ‘ಸೆಂಗೋಲ್’ ಮುಂದೆ ಗೌರವದ ಸಂಕೇತವಾಗಿ ನಮಸ್ಕರಿಸಿದರು. ಈ ಬಳಿಕ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರೊಂದಿಗೆ ತೆರಳಿ, ಸ್ಪೀಕರ್ ಪೀಠದ ಸಮೀಪದಲ್ಲಿ ಅದನ್ನು ಪ್ರತಿಷ್ಠಾಪಿಸಿದ್ದಾರೆ.