ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಗೆ 57 ವರ್ಷ ಕಳೆದಿದ್ದರು ಇನ್ನೂ ಮದುವೆಯಾಗಿಲ್ಲ. ಸಲ್ಮಾನ್ ಹೆಸರು ಸಾಕಷ್ಟು ನಟಿಯರ ಜೊತೆ ಕೇಳಿ ಬಂದಿದ್ದರು ಯಾವುದು ಮದುವೆಯ ವರೆಗೂ ಬರಲಿಲ್ಲ. ಇದೀಗ ಸಲ್ಲು ಬಾಯ್ ಗೆ ನೇರವಾಗಿ ಪತ್ರಕರ್ತೆಯೊಬ್ಬರು ತಮ್ಮನ್ನು ಮದುವೆಯಾಗುತ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ.
ಇತ್ತೀಚೆಗಷ್ಟೇ ಸಿನಿಮಾವೊಂದರ ಪ್ರಚಾರದಲ್ಲಿ ಭಾಗಿಯಾಗಿದ್ದ ಸಲ್ಮಾನ್ ಖಾನ್ ಅವರನ್ನು ಹಾಲಿವುಡ್ ಪತ್ರಕರ್ತೆಯೊಬ್ಬರು ನೇರವಾಗಿ ಮದುವೆ ವಿಷಯ ಪ್ರಸ್ತಾಪ ಮಾಡಿದ್ದಾರೆ. ‘ನಾನು ಹಾಲಿವುಡ್ ನಿಂದ ಬಂದಿದ್ದೇನೆ. ನಿಮ್ಮನ್ನು ನೋಡಿದ ತಕ್ಷಣ ಫಿದಾ ಆದೆ. ನನ್ನನ್ನು ಮದುವೆ ಆಗುತ್ತೀರಾ? ಎಂದು ಕೇಳಿದ್ದಾರೆ.
ಪತ್ರಕರ್ತೆಯ ಮಾತಿಗೆ ನಗುತ್ತಲೇ ಉತ್ತರಿಸಿರುವ ಸಲ್ಮಾನ್ ಖಾನ್, ‘ನೀವು ಶಾರುಖ್ ಖಾನ್ ಬಗ್ಗೆ ಹೇಳ್ತಾ ಇದ್ದೀರಿ. ಕನ್ಫ್ಯೂಸ್ ಮಾಡಿಕೊಂಡಿದ್ದೀರಿ’ ಎಂದು ಉತ್ತರಿಸುತ್ತಾರೆ. ‘ಇಲ್ಲ ನಾನು ನಿಮ್ಮನ್ನೇ ಕೇಳ್ತಾ ಇರೋದು. ಸಖತ್ ಹ್ಯಾಂಡ್ ಸಮ್ ಆಗಿದ್ದೀರಿ. ನೀವು ಒಪ್ಪಿದರೆ ನಾನು ಮದುವೆ ಆಗಲು ತಯಾರು’ ಎಂದು ಮತ್ತೆ ಪತ್ರಕರ್ತೆ ಮರು ಪ್ರಶ್ನೆ ಮಾಡಿದ್ದಾರೆ.
ಈ ವೇಳೆ ಪ್ರತಿಕ್ರಿಯಿಸಿದ ಸಲ್ಮಾನ್, ‘ನೀವು ಇಪ್ಪತ್ತು ವರ್ಷಗಳ ಹಿಂದೆ ಬಂದು ಈ ಪ್ರಶ್ನೆ ಕೇಳಿದ್ದರೆ ಒಪ್ಪಬಹುದಿತ್ತು. ನನಗೀಗ ಮದುವೆ ಕಾಲ ಮುಗಿದಿದೆ. ತಡವಾಗಿದೆ’ ಎಂದು ಮತ್ತೆ ತಮಾಷೆ ಮಾಡುತ್ತಲೇ ಉತ್ತರಿಸಿದ್ದಾರೆ.