ಬೆಂಗಳೂರು: ಬೆಂಗಳೂರಿನ ಬೈಯಪ್ಪನಹಳ್ಳಿಯಲ್ಲಿ ನೂತನ ‘ಕಾರ್ಯಾಚರಣೆ ನಿಯಂತ್ರಣ ಕೇಂದ್ರ’ ತಲೆ ಎತ್ತುತ್ತಿದೆ. ನಮ್ಮ ಮೆಟ್ರೋ’ದ ಹೊಸ ಮಾರ್ಗಗಳು ಸೇರಿದಂತೆ ಚಾಲಕ ರಹಿತ ಮೆಟ್ರೋ ರೈಲುಗಳ ನಿರ್ವಹಣೆಗಾಗಿ ಬೈಯಪ್ಪನಹಳ್ಳಿಯಲ್ಲಿ ನೂತನ ‘ಕಾರ್ಯಾಚರಣೆ ನಿಯಂತ್ರಣ ಕೇಂದ್ರ’ ತಲೆ ಎತ್ತುತ್ತಿದೆ. ಮೆಟ್ರೋ ಆರಂಭಗೊಂಡ ಸುಮಾರು 12 ವರ್ಷಗಳಿಂದ ಬೆಂಗಳೂರು ಮೆಟ್ರೋ ರೈಲ್ವೇ ನಿಗಮ ಒಂದೇ ನಿರ್ವಹಣಾ ಕೇಂದ್ರದಿಂದ ರೈಲುಗಳನ್ನು ನಿಯಂತ್ರಿಸುತ್ತಿದೆ.
ಈಗಿನ ನೇರಳೆ ಹಾಗೂ ಹಸಿರು ಮಾರ್ಗದ 57 ರೈಲುಗಳ ಸಂಚಾರವನ್ನು ಇಲ್ಲಿಂದ ನಿರ್ವಹಿಸಲಾಗುತ್ತಿದೆ. ಇದೀಗ ಚಾಲಕ ರಹಿತ ವ್ಯವಸ್ಥೆ ಅನುಷ್ಠಾನ ಆಗಲಿರುವ ಕಾರಣ ಬೈಯಪ್ಪನಹಳ್ಳಿಯ ಮೆಟ್ರೋದ ಡಿಪೋದಲ್ಲಿರುವ ದುರಸ್ತಿ ಕೇಂದ್ರದ ಹಿಂಭಾಗದಲ್ಲಿ ಹೊಸ ನಿರ್ವಹಣಾ ಕೇಂದ್ರ ನಿರ್ಮಾಣ ಮಾಡಲಾಗುತ್ತಿದೆ. ಜೊತೆಗೆ ಮೆಟ್ರೋದ ಮುಂಬರುವ ಗುಲಾಬಿ, ನೀಲಿ, ಹಳದಿ ಹೊಸ ಮಾರ್ಗಗಳ ನಿರ್ವಹಣೆಯಲ್ಲಿ ಈ ಕೇಂದ್ರ ಪ್ರಮುಖ ಪಾತ್ರವನ್ನು ವಹಿಸಲಿದೆ.