ಧಾರವಾಡ: ಬ್ರಿಟಿಷರು ದೇಶಕ್ಕೆ ಸ್ವಾತಂತ್ರ್ಯ ಕೊಟ್ಟು ಹೋದರು, ಆಗ ಅಧಿಕಾರ ಹಸ್ತಾಂತರ ಮಾಡಿದ್ದರು ಆ ಸಂದರ್ಭದಲ್ಲಿ ನಂದಿ ಲಾಂಛಿತ ಸುವರ್ಣ ದಂಡ ಕೊಟ್ಟಿದ್ದರಂತೆ, ಅದು ಈಗ ಬೆಳಕಿಗೆ ಬಂದಿದೆ ಎಂದು ಧಾರವಾಡದಲ್ಲಿ ಕಾಶೀ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ ಹೇಳಿದರು. ನೂತನ ಸಂಸತ್ ಭವನ ಉದ್ಘಾಟನೆ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಅವರು ದೇಶ ಸ್ವತಂತ್ರವಾದ ಮೇಲೆ ಹೊಸ ಸಂಸತ್ ಭವನ ಉದ್ಘಾಟನೆಯಾಗುತ್ತಿದೆ ಇದು ಇಡೀ ದೇಶವೇ ಹೆಮ್ಮೆ ಪಡುವಂತಹುದು. ಇಲ್ಲಿಯವರೆಗೆ ಅದು ಯಾರಿಗೂ ಗೊತ್ತಿರಲಿಲ್ಲ ಈಗ ಧರ್ಮ ಪ್ರತಿಯೊಬ್ಬ ರಾಜನಿಗೂ ಅವಶ್ಯವಾಗಿ ಬೇಕು ಕಾರಣ ಹಿಂದಿನ ಕಾಲದಲ್ಲಿ ಪ್ರತಿ ರಾಜರಿಗೂ ಧರ್ಮ ಗುರು ಇರುತ್ತಿದ್ದರು.
ರಾಜ ಸಿಂಹಾಸನವೇರಿ “ಅಹಂ ಅದಂಡಹ್ಯ” ಎನ್ನುತ್ತಿದ್ದನು ನನ್ನ ಮೇಲೆ ಯಾವ ದಂಡನೆ ಇರುವುದಿಲ್ಲ ಎನ್ನುತ್ತಿದ್ದ,ನಾನು ಎಲ್ಲರನ್ನೂ ದಂಡಿಸುವವನು ಎನ್ನುತ್ತಿದ್ದನು ಇದು ಗೊತ್ತಿರಲಿ ಎಂದ ಅವರು ಆಗ ಗುರುಗಳು ಎದ್ದು ನಿಂತು ತಮ್ಮ ಕೈಯಲ್ಲಿರುವ ಧರ್ಮ ದಂಡ ತೋರಿಸುತ್ತಿದ್ದರು ನಿನ್ನ ಮೇಲೆಯೂ ಧರ್ಮದ ದಂಡ ಇರುತ್ತದೆ ಎಂದು ಹೇಳುತ್ತಿದ್ದರು ಅದನ್ನು ಮೀರಿ ಧರ್ಮ ಮಾರ್ಗ ಬಿಟ್ಟರೆ ಧರ್ಮ ಶಿಕ್ಷೆ ಕೊಡುತ್ತದೆ ಎನ್ನುತ್ತಿದ್ದರು ಆದರೆ ಅಂತಹ ಒಂದು ಧರ್ಮ ದಂಡ ನೂತನ ಸಂಸತ್ ಭವನದಲ್ಲಿ ಪ್ರತಿಷ್ಠಾಪನೆ ಆಗಿದೆ ಇದು ಶುಭ ಸಂಕೇತ ಎಂದರು.
ಕಾಶೀ ಪೀಠ ಮಾತ್ರವಲ್ಲಇಡೀ ವಿಶ್ವವೇ ಹೆಮ್ಮೆ ಪಡುವ ನಾಯಕ ಮೋದಿ
ನೂತನ ಸಂಸತ್ ಭವನಕ್ಕೆ ಮೋದಿ ನಾಯಕತ್ವ ಹಿನ್ನೆಲೆಯಲ್ಲಿ ಒಳ್ಳೆಯ ಕೆಲಸ ಮಾಡಿದ್ದು ವಾರಣಾಸಿಯ ಸಂಸದರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ವಾರಣಾಸಿ ವ್ಯಾಪ್ತಿಯಲ್ಲಿರುವ ಕಾಶೀ ಆಗಿದೆ. ಈ ಹಿನ್ನೆಲೆ ಕಾಶೀ ಜಗದ್ಗುರುಗಳ ಹರ್ಷ ವ್ಯಕ್ತಪಡಿಸಿದ್ದು
ಈಗಾಗಲೇ ಅನೇಕ ಧಾರ್ಮಿಕ ಕ್ಷೇತ್ರಗಳನ್ನು ಜೀರ್ಣೋದ್ಧಾರ ಮಾಡುತ್ತಿದ್ದಾರೆ.
ಕಾಶೀ ವಿಶ್ವನಾಥ ಮಂದಿರ ಜೀರ್ಣೋದ್ಧಾರ ಆಗಿದೆ ಇದರ ಜೊತೆಗೆ ಮಹಾಕಾಳೇಶ್ವರ ಮಂದಿರ ಜೀರ್ಣೋದ್ಧಾರ ಆಗಿದೆ ಇನ್ನು ಅಯೋಧ್ಯೆ ರಾಮಮಂದಿರ ಜೀರ್ಣೋದ್ಧಾರ ಆಗುತ್ತಿದೆ. ಇದೆಲ್ಲವೂ ದೇಶದ ಹಿತದೃಷ್ಟಿಯಿಂದ ಆಗುತ್ತಿವೆ ನಮ್ಮ ಸಂಸದೀಯ ಕ್ಷೇತ್ರದಿಂದ ಚುನಾಯಿತ ಆದವರು ಮೋದಿ ಮೋದಿಯವರು ನಮ್ಮ ಗುರುಕುಲದ ಶತಾಬ್ದಿ ಕಾರ್ಯಕ್ರಮಕ್ಕೆ ಬಂದಿದ್ದರು ಆಗ ಸಿದ್ಧಾಂತ ಶಿಖಾಮಣಿ ಬಿಡುಗಡೆ ಮಾಡಿದ್ದರು ಸನಾತನ ವೀರಶೈವ ಧರ್ಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು ಎಂದು ಮಾಹಿತಿ ನೀಡಿದರು.