ಬೆಂಗಳೂರು: ನಾವು ಘೋಷಿಸಿರುವ ಗ್ಯಾರಂಟಿ ಯೋಜನೆಗಳನ್ನು ಕ್ರಮಬದ್ಧವಾಗಿ ಜಾರಿ ಮಾಡ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ಈ ಸಂಬಂಧ ಬೆಂಗಳೂರಿನ ಸದಾಶಿವ ನಗರದಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳನ್ನು ನಾವು ಮಾತು ಕೊಟ್ಟಂತೆ ಜಾರಿ ಮಾಡ್ತೇವೆ. ಇವತ್ತು ಸಿಎಂ ಅಧಿಕಾರಿಗಳ ಜತೆ ಚರ್ಚೆ ಮಾಡ್ತಾರೆ. ಸಿಎಂ ಹತ್ರ ಹಣಕಾಸು ಇಲಾಖೆ ಇದೆ. ಕೊಟ್ಟ ಮಾತು ಉಳಿಸ್ಕೋತೇವೆ.
ಕ್ರಮಬದ್ಧವಾಗಿ ಗ್ಯಾರಂಟಿ ಜಾರಿ ಮಾಡ್ತೇವೆ. ನಮ್ಮದು ಜವಾಬ್ದಾರಿಯುತ ಸರ್ಕಾರ. ಎಲ್ಲರಿಗೂ ಏನು ಮಾತು ಕೊಟ್ಟಿದ್ದೇವೆಯೋ ಅದನ್ನು ಉಳಿಸ್ಕೋತೇವೆ. ನೀವೇನೂ ಗಾಬರಿ ಪಟ್ಕೋಬೇಡಿ ಎಂದರು, ಇವತ್ತು ಸಿಎಂ ಪರಿಶೀಲನಾ ಸಭೆ ನಡೆಸ್ತಾರೆ. ಸಂಪುಟ ಸಭೆಗೆ ಬೇಕಿರುವ ಮಾಹಿತಿ ಪಡ್ಕೋತಾರೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.