ಕಲಬುರಗಿ: ನ್ಯಾಯಕ್ಕಾಗಿ ಅಂಗಲಾಚಿ ಸಿಮೆಂಟ್ ಕಂಪನಿ ಎದುರು ಧರಣಿ ಸತ್ಯಾಗ್ರಹ ಕುಳಿತಿದ್ದ ರೈತನೊರ್ವ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕಲಬುರಗಿಯಲ್ಲಿ ನಡೆದಿದೆ.ಸೇಡಂ ತಾಲೂಕಿನ ಶ್ರೀ ಸಿಮೆಂಟ್ ಕಂಪನಿ ಎದುರು ಘಟನೆ ನಡೆದಿದ್ದು ಬೆನಕನಹಳ್ಳಿ ನಿವಾಸಿ ದೇವೇಂದ್ರಪ್ಪ ಮೃತ ದುರ್ದೈವಿ ಎಂದು ಹೇಳಲಾಗ್ತಿದೆ.
ಕಂಪನಿಗೆ ಭೂಮಿ ನೀಡಿ ನೌಕರಿ ಸಿಗದ ಹಿನ್ನಲೆ ಹಂಗನಳ್ಳಿ ಬೆನಕನಹಳ್ಳಿ ಸೇರಿ ಸುತ್ತಮುತ್ತಲ ರೈತರು ಕಂಪನಿ ಎದುರು ಧರಣಿ ಸತ್ಯಾಗ್ರಹ ಕುಳಿತಿದ್ದರು. ಇದೇವೇಳೆ ಧರಣಿಯಲ್ಲಿ ಭಾಗಿಯಾಗಿದ್ದ ರೈತ ದೇವೇಂದ್ರಪ್ಪ ಇವತ್ತು ಸಾವನ್ನಪ್ಪಿದ್ದಾನೆ.ಇಷ್ಟಾದ್ರೂ ಯಾವೊಬ್ಬ ಅಧಿಕಾರಿ ಬಂದು ನೋವು ಆಲಿಸಿಲ್ಲ ಅಂತ ಗ್ರಾಮಸ್ಥರು ಆರೋಪಿಸಿದ್ದಾರೆ..