ಧಾರವಾಡದ ಕಮಲಾಪೂರದಲ್ಲಿ ಕಳೆದ ಮೇ 25 ರಂದು ರಾತ್ರಿ ನಡೆದಿದ್ದ ರೌಡಿಶೀಟರ್ ಮಹ್ಮದ್ ಕುಡುಚಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 36 ಗಂಟೆಗಳಲ್ಲಿ, ಕೊಲೆ ಪ್ರಕರಣದ ಎಲ್ಲಾ 6 ಆರೋಪಿಗಳನ್ನು ಬಂಧಿಸುವಲ್ಲಿ ಧಾರವಾಡದ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣದ ತನಿಖೆಗಾಗಿ ಧಾರವಾಡ ಶಹರ ಉಪವಿಭಾಗದ ಎಸಿಪಿ ವಿಜಯಕುಮಾರ, ಹುಬ್ಬಳ್ಳಿ-ಧಾರವಾಡ ಸಂಚಾರ ಉಪವಿಭಾಗ ಎಸಿಪಿ ವಿನೋದ ಮುಕ್ತದಾರ ನೇತೃತ್ವದ ತಂಡವನ್ನು ನೇಮಿಸಲಾಗಿತ್ತು. ಕೊಲೆ ನಡೆದ ನಂತರ ಆರೊಪಿಗಳ ಜಾಡು ಹಿಡಿದ ಪೊಲೀಸರ ತಂಡ ಆರು ಜನ ಆರೋಪಿಗಳು ಬಂಧಿಸಿ ಹೆಡೆಮುರಿ ಕಟ್ಟಿದ್ದಾರೆ.
ಇನ್ನೂ ಕೊಲೆಗೆ ಆಸ್ತಿಗೆ ಸಂಬಂಧಿಸಿದ ವ್ಯವಹಾರವೇ ಕಾರಣ ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆರೋಪಿತರನ್ನು ಧಾರವಾಡದ ಕುಖ್ಯಾತ ರೌಡಿಶೀಟರ್ ಆಗಿದ್ದ ಮೃತ ಫೂಟ್ ಇರ್ಪಾನ್ ಅಲಿಯಾಸ್ ಸೈಯದ್ ಹಂಚಿನಾಳ ಮಗನಾದ ಅರ್ಬಾಜ್ ಹಂಚಿನಾಳ(24), ಮುಂಡಗೋಡ ಮೂಲದ ಅಲ್ಲಾವುದ್ದೀನ್ @ ರಹೀಂ ತಂದೆ ಮಹ್ಮದಜಾಫರ್ ರಜೇಬ್ (26),
ಧಾರವಾಡ ಮೂಲದವರಾದ ಅಜಯ್ @ ಅಜ್ಯಾ ತಂದೆ ಫಕ್ಕೀರಪ್ಪ ಮಣ್ಣ (23) ಹಾಗೂ ಅಬೀದ್ @ ಅಬೀದಬೈ ತಂದೆ ನಾಸಿರ್ಅಹ್ಮದ ಚಟ್ಟರಕಿ (31), ಹಾವೇರಿಯ ಸವಣೂರ ಮೂಲದ ಅಬೀದ್ @ ಅಬೀದ್ ಅಹ್ಮದ ತಂದೆ ಬಾಷಾಸಾಬ್ ಚಿಟ್ಟೆವಾಲೆ (27), ಧಾರವಾಡದ ಸಾಹೀಲ್ ತಂದೆ ರಫೀಕ್ ನದಾಫ್ 26, ಹಾಗೂ ಮುಂಡಗೋಡದ ಕೊಲೆ ಮಾಡಲು ಬಂದು ತಮ್ಮರಿಂದಲೆರ ಹತ್ಯೆಯಾದ ಗಣೇಶ @ ಗಣಿ ತಂದೆ ಶಂಕರ ಕಮ್ಮಾರ @ ಸಾಳುಂಕೆ, (23) ಎಂದು ಗುರುತಿಸಲಾಗಿದೆ.
ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾದ ಎ.ಸಿ.ಪಿ ಧಾರವಾಡ ಶಹರ ವಿಜಯಕುಮಾರ, ವಿನೋದ ಮುಕ್ತದಾರ, ಎಸಿಪಿ ಸಂಚಾರ ಉಪವಿಭಾಗ ಹುಬ್ಬಳ್ಳಿ-ಧಾರವಾಡ, ಧಾರವಾಡ ಉಪನಗರ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಶಂಕರಗೌಡ ಬಸನಗೌಡರ್, ವಿದ್ಯಾಗಿರಿ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಸಂಗಮೇಶ ದಿಡಿಗನಾಳ ಹಾಗೂ ಸಿಬ್ಬಂದಿ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತ ರಮಣಗುಪ್ತ ಶ್ಲಾಘಿಸಿ 10,000 ರೂ ಬಹುಮಾನ ಘೋಷಣೆಯನ್ನು ಮಾಡಿದ್ದಾರೆ.