ಗದಗ ನಗರದ ಹೊರವಲಯದಲ್ಲಿರುವ ನಾಗಸಮುದ್ರದ ದಂಡಿನ ದುರ್ಗಮ್ಮ ಜಾತ್ರೆ ಹಿನ್ನೆಲೆ ಗದಗ ಬೆಟಗೇರಿಯಲ್ಲಿ ಜವಾರಿ ಕೋಳಿ (ನಾಟಿ ಕೋಳಿ) ವ್ಯಾಪಾರ ಬಲು ಜೋರಾಗಿದ. ನಾಳೆ ಅದ್ಧೂರಿಯಾಗಿ ನಡೆಯುವ ಜಾತ್ರೆ ಹಿನ್ನಲೆ ನಗರದಲ್ಲಿ ಕೋಳಿ ವ್ಯಾಪಾರ ಭರ್ಜರಿಯಾಗಿ ನಡೆಯುತ್ತೆ. ಜಾತ್ರೆಗೆ ರಾಜ್ಯ- ಅಂತರಾಜ್ಯದಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸ್ತಿದ್ದಾರೆ.
ಇನ್ನು ಸಹ ಕುಟುಂಬ ಸಮೇತರಾಗಿ ಆಗಮಿಸ್ತಿರೋ ಭಕ್ತಾಧಿಗಳು ದಂಡಿನ ದುರ್ಗಮ್ಮ ಆವರಣದಲ್ಲಿ ತಾತ್ಕಾಲಿಕ ಶೆಡ್ ಗಳನ್ನ ಹಾಕಿ ಎರಡ್ಮೂರು ದಿನಗಳ ಕಾಲ ಸ್ಥಳದಲ್ಲೇ ಬೀಡುಬಿಟ್ಟು ಶ್ರಧ್ಧಾ ಭಕ್ತಿಯಿಂದ ತಾಯಿಗೆ ಬೇಡಿಕೊಂಡು ಹೋಗ್ತಾರೆ. ಜಾತ್ರೆ ಹಿನ್ನೆಲೆ ಬೆಟಗೇರಿಯಲ್ಲಿ ಕೋಳಿ, ಹುಂಜಗಳ ಮಾರಾಟ ಬಲು ಜೋರಾಗಿದೆ. ಜಾತ್ರೆ ಹಿನ್ನೆಲೆ ನಾಟಿ ಕೋಳಿ ಹುಂಜಗಳಿಗೆ ಬೇಡಿಕೆ ಹೆಚ್ಚಾಗಿದೆ ಒಂದು ಸಾವಿರ ರೂಪಾಯಿದಿಂದ ಎರಡು ಸಾವಿರ ರೂಪಾಯಿ ವರೆಗೆ ಕೋಳಿ, ಹುಂಜಗಳನ್ನು ಮಾರಾಟ ಮಾಡ್ತಿದ್ದಾರೆ.