ಕಿರುತೆರೆಯ ಖ್ಯಾತ ನಟಿ, ನಿರೂಪಕಿ ಸ್ನೇಹಲ್ ರೈ ತಮಗೆ 10 ವರ್ಷಗಳ ಹಿಂದೆಯೇ ಮದುವೆಯಾಗಿದೆ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ನೀಡಿದ್ದಾರೆ. ಈವರೆಗೂ ಮದುವೆಯ ಬಗ್ಗೆ ಮಾತನಾಡದೇ ಇದ್ದ ಸ್ನೇಹಲ್, ಮೊನ್ನೆಯಷ್ಟೇ ಅದರ ಕುರಿತು ಕುರುಹು ನೀಡಿದ್ದರು. ಇದೀಗ ಹತ್ತು ವರ್ಷಗಳ ಹಿಂದೆಯೇ ತಾವು ಮದುವೆ ಆಗಿರುವುದಾಗಿ ಹೇಳಿ ಅಚ್ಚರಿ ಮೂಡಿಸಿದ್ದಾರೆ.
ತಮಗಿಂತ 21 ವರ್ಷ ವಯಸ್ಸಿನ ಹಿರಿಯ ರಾಜಕಾರಣಿಯನ್ನು ಹತ್ತು ವರ್ಷಗಳ ಹಿಂದೆಯೇ ತಾವು ಮದುವೆ ಆಗಿರುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ಸ್ನೇಹಲ್ ಬರೆದುಕೊಂಡಿದ್ದಾರೆ. ಅದಕ್ಕೂ ಮೊದಲು ಅನುಮಾನ ಮೂಡಿಸುವಂತಹ ಬರಹವನ್ನು ಅವರು ಹಂಚಿಕೊಂಡಿದ್ದರು. ಆ ಮೂಲಕ ಮದುವೆಯ ವಿಚಾರವನ್ನು ಹೊರ ಹಾಕಿದ್ದರು.
ಸೋಷಿಯಲ್ ಮೀಡಿಯಾದಲ್ಲಿ ಸ್ನೇಹಲ್, ‘ವಿವಾಹಿತ ಮಹಿಳೆಯರಿಗಾಗಿ ನಡೆಯುವ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವೆ’ ಎಂದು ಅವರು ಬರೆದುಕೊಂಡಿದ್ದರು. ಆಗ ಅಭಿಮಾನಿಗಳು, ‘ನಿಮಗೆ ಮದುವೆಯೇ ಆಗಿಲ್ಲ, ಅದು ಹೇಗೆ ಸಾಧ್ಯ?’ ಎಂದು ಪ್ರಶ್ನೆ ಮಾಡಿದ್ದರು. ಅದಕ್ಕೆ ಉತ್ತರವಾಗಿ ಪತಿಯೊಂದಿಗಿನ ಫೋಟೋವನ್ನೂ ನಟಿ ಹಂಚಿಕೊಂಡಿದ್ದರು.
ಹತ್ತು ವರ್ಷಗಳ ಹಿಂದೆ ಮಧ್ವೇಂದ್ರ ಕುಮಾರ್ ರೈ ಎನ್ನುವ ರಾಜಕಾರಣಿಯ ಜೊತೆ ಮದುವೆ ಆಗಿರುವುದಾಗಿ ಸ್ನೇಹಲ್ ರೈ ಸ್ಪಷ್ಟಪಡಿಸಿದ್ದಾರೆ. ಕಾರ್ಯಕ್ರವೊಂದರಲ್ಲಿ ತಮ್ಮಿಬ್ಬರ ಭೇಟಿ ಆಗಿ ಬಳಿಕ ಕುಟುಂಬದ ಸಮ್ಮತಿಯೊಂದಿಗೆ ಮದುವೆ ಆಗಿರುವುದಾಗಿಯೂ ಅವರು ಹೇಳಿಕೊಂಡಿದ್ದಾರೆ. ಅಲ್ಲದೇ, ಪತಿ ಮತ್ತು ತಮ್ಮ ನಡುವಿನ ವಯಸ್ಸಿನ ಅಂತರವನ್ನೂ ಅವರು ಹೇಳಿದ್ದಾರೆ