ಬೆಂಗಳೂರು: ಮನೆಯಲ್ಲಿ ಅತ್ತೆ-ಸೊಸೆ ಇದ್ದರೆ ಯಾರಿಗೆ ದುಡ್ಡು ಹಾಕಬೇಕು? ಮನೆ ಯಜಮಾನಿ ಯಾರು? ಬ್ಯಾಂಕ್ ಖಾತೆ ಇದೆಯಾ? ಎಲ್ಲವೂ ತೀರ್ಮಾನ ಆಗಬೇಕು ಎಂದು ಗ್ಯಾರಂಟಿ ಯೋಜನೆ (Congress Guarantee Card) ಜಾರಿ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar) ಮಾತನಾಡಿದರು. 1ನೇ ತಾರೀಖು ಕ್ಯಾಬಿನೆಟ್ ಇದೆ. ಗೈಡ್ಲೈನ್ಸ್ ಬರಲಿದೆ. ಸ್ಟ್ರೈಕ್ ಮಾಡೋರಿಗೆ ಬೇಡ ಅನ್ನಲ್ಲ, ಮಾಡ್ಲಿ. 15 ಲಕ್ಷ ರೂ. ಪ್ರತಿಯೊಬ್ಬರ ಅಕೌಂಟ್ಗೆ ಹಾಕ್ತೀವಿ ಅಂದ್ರಲ್ಲಾ, ಹಾಕಿದ್ರಾ? ಮಗು ಹುಟ್ಟಿ ಇನ್ನೂ 15 ದಿನ ಆಗಿದೆ. ಬಟ್ಟೆ ಹೊಲಿಸಬೇಕು, ಅಳತೆ ಕೊಡಬೇಕು ಎಂದು ಗ್ಯಾರಂಟಿ ಯೋಜನೆಗಳ ಜಾರಿ ವಿಳಂಬವನ್ನು ಸಮರ್ಥಿಸಿಕೊಂಡರು.
ಖಾತೆ ವಿಚಾರವಾಗಿ ರಾಮಲಿಂಗರೆಡ್ಡಿ ಅಸಮಾಧಾನ ಕುರಿತು ಪ್ರತಿಕ್ರಿಯಿಸಿ, ಪಕ್ಷದ ಹಿತದೃಷ್ಠಿಯಿಂದ ಭೇಟಿ ನೀಡಿ ಮಾತನಾಡಿದ್ದೇನೆ. ಕೆಲವೊಂದು ಊಹಾಪೋಹದ ಸ್ಟೋರಿ ಬಂದಿದೆ. ಎಂಟು ಬಾರಿ ಯಾರಾದರೂ ಆಯ್ಕೆಯಾಗಿದ್ರೆ ಅದು ರಾಮಲಿಂಗಾರೆಡ್ಡಿ. ನಾವು ಈ ಪಕ್ಷ ಕಟ್ಟಿದ್ದೇವೆ, ಬೆಳೆಸಿದ್ದೇವೆ. ಸಾಕಷ್ಟು ನೋವುಗಳನ್ನ ಅನುಭವಿಸಿದ್ದೇವೆ ಎಂದು ಹೇಳಿದರು. ಕಳೆದ ಬಾರಿ ಅವರಿಗೂ ನನಗೂ ಸಚಿವ ಸ್ಥಾನ ಇರಲಿಲ್ಲ. ನಾವು ಬೇರೆ ಪಾರ್ಟಿಗೆ ಹೋಗಿದ್ರೆ ಏನೇನೋ ಆಗ್ತಿದ್ವಿ. ಮನುಷ್ಯ ಅಂದಮೇಲೆ ಸಿನಿಯಾರಿಟಿ ಅನ್ನೋದು ಬರುತ್ತೆ. ರಾಮ ಲಿಂಗಾರೆಡ್ಡಿ ಅವರು ಪಕ್ಷಕ್ಕೆ ಬದ್ಧರಾಗಿದ್ದಾರೆ. ಮನುಷ್ಯ ಅಂದಮೇಲೆ ಹಿರಿತನ ಬರುತ್ತೆ. ಕೆಲವೊಮ್ಮೆ ರಾಜಕೀಯದಲ್ಲಿ ಏನೂ ಮಾಡಲು ಆಗಲ್ಲ ಎಂದು ತಿಳಿಸಿದರು.