ಚಿಕ್ಕಮಗಳೂರು : ರಾಜ್ಯ ಸರ್ಕಾರದಿಂದ ಅನುದಾನ ತಡೆ ವಿಚಾರಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶೀ ಸಿ.ಟಿ. ರವಿ ಕಾಂಗ್ರೆಸ್ ವಿರುದ್ದ ಕಿಡಿಕಾರಿದ್ದಾರೆ. ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ತಡೆಹಿಡಿದಿರುವ ಅಭಿವೃದ್ಧಿಕಾಮಗಾರಿಗಳನ್ನು ಸರ್ಕಾರ ಪುನರಾಂಭಿಸುವಂತೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಚಿಕ್ಕಮಗಳೂರು ನಗರದಲ್ಲಿ ಪ್ರತಿಭಟನೆ ನಡೆಸಿದರು. ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಶಾಸಕ ಸಿ.ಡಿ. ರವಿ, ಕಾಂಗ್ರೆಸ್ ನೇತೃತ್ವದ ಸರ್ಕಾರ ಬಂದ ತಕ್ಷಣ ಕಾಮಗಾರಿ, ಅನುದಾನ ಸ್ಥಗಿತ ಮಾಡಿದೇ ಸಾಧನೆ ಎಂದು ಲೇವಡಿ ಮಾಡಿದ್ದಾರೆ.
ಅನುದಾನದ ತಡೆ ಹಿಡಿಯುವುದು ರಾಜಕಾರಣ, ಅಭಿವೃದ್ಧಿ ಭಾಗವಲ್ಲ ,ಜನ ವೋಟ್ ಹಾಕಿದ್ದು ಅಭಿವೃದ್ಧಿ ಕಾರ್ಯ ಮಾಡಲಿ ಅಂತಾ ತಡೆ ಹಿಡಿಯುವುದಕ್ಕೆ ಅಲ್ಲ. ಅಭಿವೃದ್ಧಿ ಕೆಲಸಗಳನ್ನು ಮಾಡುವುದು ಸರ್ಕಾರದ ಕರ್ತವ್ಯವಾಗಿದ್ದು ಸರ್ಕಾರ ತಪ್ಪು ಮಾಡಿದಾಗ ಅದನ್ನು ಎಚ್ಚರಿಸುವ ಕೆಲಸವನ್ನು ವಿರೋಧಪಕ್ಷವಾಗಿ ನಾವು ಮಾಡಿದ್ದೇವೆ. ಚಿಕ್ಕಮಗಳೂರು ಅಂತ ಜಿಲ್ಲೆಯಲ್ಲಿ ಮಳೆಗಾಲ ಆರಂಭವಾಗುತ್ತೆ, ಅಲ್ಲಿ ಕಾಮಗಾರಿಗಳನ್ನು ಬೇಗ ಮುಗಿಸಬೇಕು, ತಡೆಹಿಡಿಯುವ ಆದೇಶ ಮಾಡಿದ್ರೆ ಅಭಿವೃದ್ಧಿ ಕಾಮಗಾರಿ ಎಲ್ಲಿಂದ ಮಾಡುವುದು ಸರ್ಕಾರ ಅನುದಾನ ತಡೆ ಹಿಡಿದಿರುವುದು ಆಸ್ಪತ್ರೆ, ಸೇತುವೆ, ರಸ್ತೆಯ ಕಾಮಗಾರಿಗಳು ಸ್ಥಗಿತವಾಗಿದೆ ಎಂದರು.