ಹುಬ್ಬಳ್ಳಿ: ತಂಬಾಕಿನಿಂದ ಹೃದಯಕ್ಕೆ ಹಾನಿ ತಂಬಾಕು ಹೃದಯ ಮತ್ತು ರಕ್ತ ಅಪಧಮನಿಗಳಿಗೆ ಹಾನಿ ಮಾಡುವ ವಿಷವನ್ನು ಹೊಂದಿರುತ್ತದೆ, ಇದು ಅಸಮರ್ಪಕ ಕಾರ್ಯಕ್ಕೆ ಕಾರಣವಾಗುತ್ತದೆ. ತಂಬಾಕು ಸೇವನೆಯಿಂದ ಕ್ರಮೇಣ ರಕ್ತ ಅಪಧಮನಿಗಳನ್ನು ಸಂಕುಚಿತಗೊಳಿಸುತ್ತಾ ಹೋಗುತ್ತದೆ, ದೇಹದಾದ್ಯಂತ ರಕ್ತ ಮತ್ತು ಆಮ್ಲಜನಕದ ನೈಸರ್ಗಿಕ ಹರಿವು ನಿಧಾನಗೊಳ್ಳುತ್ತದೆ. ಜೊತೆಗೆ ಹೃದಯದ ಬಡಿತವು ಹೆಚ್ಚಾಗುವುದು ಹಾಗೂ ಹಿಗ್ಗುವುದು. ಈ ಅಸಹಜ ಕಾರ್ಯಚಟುವಟಿಕೆಯು ಅಧಿಕ ರಕ್ತದೊತ್ತಡ ಮತ್ತು ಹೃದಯರಕ್ತನಾಳದ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ನೀವು ಧೂಮಪಾನವನ್ನು ಒಂದೇ ದಿನ ಏಕಾಏಕಿ ನಿಲ್ಲಿಸಿದ್ರೆ ಸಮಸ್ಯೆಯಾಗುತ್ತದೆ. ನಿಕೋಟಿನ್ ಸಿಗದೆ ನಿಮಗೆ ಅನೇಕ ಅನಾರೋಗ್ಯ ಕಾಡಬಹುದು. ತಲೆನೋವು ಕಾಣಿಸಿಕೊಳ್ಳಬಹುದು. ಉತ್ಸಾಹ ಕಡಿಮೆಯಾಗುತ್ತದೆ. ಕಿರಿಕಿರಿ, ಕೋಪ ಬರುತ್ತದೆ. ಹಾಗಾಗಿ ಸಿಗರೇಟ್ ಬದಲು ನೀವು ನಿಕೋಟಿನ್ ಬದಲಿ ಚಿಕಿತ್ಸೆ ಶುರು ಮಾಡಬಹುದು. ನಿಕೋಟಿನ್ ಗಮ್ ಬಳಸಬಹುದು.
ಬೀಡಿ, ಸಿಗರೇಟು ಸೇರಿದಂತೆ ತಂಬಾಕನ್ನು ಬೇರೆ ಬೇರೆ ರೂಪಗಳಲ್ಲಿ ಸೇವಿಸುವುದು ಆರೋಗ್ಯಕ್ಕೆ ಹಾನಿಕರ, ಇದು ಕೇವಲ ಜೀವನ ನಷ್ಟವಷ್ಟೇ ಆಲ್ಲ; ಆರ್ಥಿಕ ನಷ್ಟವನ್ನೂ ತರುತ್ತದೆ ಎಂದು ಹೇಳಿದರೂ ಈ ಚಟಕ್ಕೆ ಅ ಹೊಡೆಯುವವರ ಪ್ರಮಾಣವೇನೂ ಕಡಿಮೆಯಾಗಿಲ್ಲ. ಈ ಕುರಿತು ಧಾರವಾಡ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಯಾವ ರೀತಿ ಇದರ ದುಷ್ಪರಿಣಾಮ ಬೀರುತ್ತವೆ ಮತ್ತು ಈ ಕುರಿತು ಶಾಲಾ ಕಾಲೇಜುಗಳಲ್ಲಿ ರೈತರಲ್ಲಿ ಯಾವ ರೀತಿಯ ಜಾಗೃತಿ ಆಗಬೇಕು ಇದರ ಕದಂಬ ಬಾಹು ಹೇಗೆ ಚಾಚುತ್ತಿದೆ ಎಂಬ ಕುರಿತು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ.ಶಶೀಧರ ಅತ್ಯುತ್ತಮ ಮಾಹಿತಿ ನೀಡಿದ್ದಾರೆ.
ವಿಶ್ವ ತಂಬಾಕು ರಹಿತ ದಿನ. ವಿಶ್ವ ಆರೋಗ್ಯ ಸಂಸ್ಥೆಯು ಪ್ರತಿ ವರ್ಷ ಜಾಗೃತಿ ಮೂಡಿಸುವ ಸಲುವಾಗಿ ಒಂದೊಂದು ಘೋಷಾವಾಕ್ಯದೊಂದಿಗೆ ಆಚರಿಸುತ್ತಿದೆ. ಈ ವರ್ಷ ‘ಆಹಾರ ಅಗತ್ಯ ತಂಬಾಕು ಅಲ್ಲ” ಎಂಬ ಘೋಷಾವಾಕ್ಯದೊಂದಿಗೆ ಎಲ್ಲೆಡೆ ಜಾಗೃತಿ ಮೂಡಿಸಲಾಗುತ್ತಿದೆ. ತಂಬಾಕು ವ್ಯಸನವನ್ನು ಬಿಡುವುದು ಅಷ್ಟು ಸುಲಭದ ಮಾತಲ್ಲ. ಬಹುತೇಕರು ಈ ವ್ಯಸನಕ್ಕೆ ದಾಸರಾಗಿರುತ್ತಾರೆ. ಇಂಥವರು ತಂಬಾಕು ಅದರಲ್ಲೂ ಧೂಮಪಾನ ತ್ಯಜಿಸುವುದು ಕಷ್ಟವೇ ಸರಿ. ಆದರೆ, ತಂಬಾಕು ಸೇವನೆಯನ್ನು ಬಿಡದೆ ಹೋದರೆ ಶೀಘ್ರವೇ ಇದರಿಂದ ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ ಅಥವಾ ಇತರೆ ಅಂಗಾಂಗ ವೈಫಲ್ಯದಿಂದಲೂ ಬಳಲಬೇಕಾಗುತ್ತದೆ. ತಂಬಾಕು ಸೇವನೆ ನಿಲ್ಲಿಸದೇ ಹೋದರೆ ಏನೆಲ್ಲಾ ಆರೋಗ್ಯ ಸಮಸ್ಯೆ ಎದುರಾಗಲಿದೆ ಹಾಗೂ ತಂಬಾಕು ಸೇವನೆ ತ್ಯಜಿಸುವ ಮಾರ್ಗದ ಬಗ್ಗೆ ವೈದ್ಯರು ಸಲಹೆ ನೀಡಿದ್ದಾರೆ.
ಏನೆಲ್ಲಾ ಕಾಯಿಲೆ ಬರಲಿದೆ?
ತಂಬಾಕು ಸೇವನೆಯಿಂದ ಹಲವು ರೀತಿಯ ಆರೋಗ್ಯ ಸಮಸ್ಯೆಯನ್ನು ಎದುರಿಸಬೇಕಾಗಬಹುದು. ಪ್ರಮುಖವಾಗಿ ಇದು ಹೃದಯ ರಕ್ತನಾಳದ ಕಾಯಿಲೆ, ದೀರ್ಘಕಾಲದ ಶ್ವಾಸಕೋಶದ ಕಾಯಿಲೆ, ದುರ್ಬಲ ಫಲವತ್ತತೆ, ವಿವಿಧ ರೀತಿಯ ಕ್ಯಾನ್ಸರ್ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹೊಗೆ ಕಾರ್ಸಿನೋಜೆನ್ಗಳನ್ನು ಹೊಂದಿರುತ್ತದೆ, ಇದು ಸಾಮಾನ್ಯ ಜೀವಕೋಶಗಳಲ್ಲಿ ರೂಪಾಂತರಗಳನ್ನು ಪ್ರೇರೇಪಿಸುತ್ತದೆ, ಇದರ ಪರಿಣಾಮವಾಗಿ ಅಸಹಜ ಜೀವಕೋಶದ ಬೆಳವಣಿಗೆ ಮತ್ತು ಕ್ಯಾನ್ಸರ್ ಉಂಟಾಗುತ್ತದೆ.
ಧೂಮಪಾನದ ಅಪಾಯಗಳು:
- ಮುಖ ಸುಕ್ಕುಗಟ್ಟುವುದು
- ಹೃದಯರಕ್ತನಾಳದ ಕಾಯಿಲೆಗಳು
- ಶ್ವಾಸಕೋಶ, ಮೂತ್ರಪಿಂಡ, ಗಂಟಲು, ಬಾಯಿ, ಹೊಟ್ಟೆ ಮತ್ತು ಮೇದೋಜೀರಕ ಗ್ರಂಥಿಯ ಕ್ಯಾನ್ಸರ್
- ಆಸ್ಟಿಯೊಪೊರೋಸಿಸ್
- ಹಲ್ಲುಗಳು ನಿಶ್ಯಕ್ತಿಯಾಗುವುದು
- ವೀರ್ಯಗಳ ಕೊರತೆ
- ಕಣ್ಣಿನ ಪೊರೆ, ಕುರುಡುತನ
- ಉಬ್ಬಸ, ಕೆಮ್ಮು
- ಸೋಂಕಿತ ರಕ್ತ ಮತ್ತು ರೋಗನಿರೋಧಕ ಶಕ್ತಿ ಕುಂದುವುದು. ಈ ಕುರಿತು ಜಾಗೃತಿ ಅಗತ್ಯವಾಗಿದೆ.
ಡಾ.ಶಶೀಧರ, ಪ್ರೋಪೇಸರ್ ಹಾಗೂವಿಭಾಗದ ಮುಖ್ಯಸ್ಥರು, ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿಭಾಗ
ಕಿಮ್ಸ್ ಆಸ್ಪತ್ರೆ, ಹುಬ್ಬಳ್ಳಿ