ಸ್ಯಾಂಡಲ್ವುಡ್ ನಟ ಡಾಲಿ ಧನಂಜಯ್ ಚಿತ್ರರಂಗಕ್ಕೆ ಎಂಟ್ರಿಕೊಟ್ಟು ಹತ್ತು ವರ್ಷ ಕಳೆದಿದೆ. ಹತ್ತು ವರ್ಷಗಳಲ್ಲಿ ಸಾಕಷ್ಟು ಸಾಧನೆ ಮಾಡಿರುವ ಡಾಲಿ ಇದೀಗ ಮಂಡ್ಯ ಜಿಲ್ಲೆಯ ಪಾಂಡವಪುರ ಶಾಲೆಗೆ ಡಾಲಿ ಭೇಟಿ ನೀಡಿ, ಮಕ್ಕಳಿಗೆ ಚಾಕ್ಲೇಟ್ ಹಾಗೂ ಹೂವು ನೀಡಿ ಸ್ವಾಗತಿಸಿದ್ದಾರೆ.
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಚಲುವರಸನಕೊಪ್ಪಲು ಗ್ರಾಮದಲ್ಲಿ ಕಾಂಗ್ರೆಸ್ ಸರ್ಕಾರ ಉಚಿತ ಭಾಗ್ಯಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಾಲಿ ಧನಂಜಯ್, ಸುಮ್ಮನೆ ನನಗೆ ರಾಜಕೀಯ ಪ್ರಶ್ನೆ ಕೇಳಿ ತಗಲಾಕಿಸುತ್ತೀರಾ. ನಾನು ಯಾವುದೇ ಪಕ್ಷದ ಪರ ಅಥವಾ ವಿರೋಧವಾಗಿ ಮಾತಡಲ್ಲ. ಸಾಮಾನ್ಯ ಮನುಷ್ಯನಾಗಿ ಹೇಳ್ತೀನಿ.
ತಿಂಗಳಿಗೆ 10 ಕೆಜಿ ಅಕ್ಕಿ ಕೊಟ್ಟರೆ ಅಡುಗೆ ಮಾಡಿ, ಊಟ ಮಾಡಿಕೊಂಡು ಮನೆಯಲ್ಲಿ ಇರೋಕೆ ಆಗಲ್ಲ. ಅಕ್ಕಿ ಕೊಟ್ಟರೆ ಹಸಿವನ್ನು ನೀಗಿಸುತ್ತೆ ಇತರೆ ಖರ್ಚಿಗೆ ಜನ ದುಡಿಯಲೇ ಬೇಕು. ಬಡ ಮನುಷ್ಯನಿಗೆ ಅಕ್ಕಿ ಕೊಟ್ಟರೆ ಸೋಮಾರಿ ಆಗುತ್ತಾನೆ ಅನ್ನೋದು ತಪ್ಪು, ಇಲ್ಲದವರಿಗೆ ಸಹಾಯ ಮಾಡುವುದು ತಪ್ಪಲ್ಲ ಎಂದು ಧನಂಜಯ್ ಹೇಳಿದ್ದಾರೆ.
ತಿಂಗಳ ಆದಾಯಕ್ಕಿಂತ ಕಡಿಮೆ ಇರುವವರ ಹಸಿವು ನೀಗಿಸಲು ಅಕ್ಕಿ ಕೊಟ್ಟರೆ ತಪ್ಪಾಗಿ ಕಾಣಲ್ಲ ಆದರಿಂದ ಜನ ಸೋಮಾರಿಗಳು ಆಗುತ್ತಾರೆ ಅಂದ್ರೆ ಅದು ತಪ್ಪು ಎಂದು ನಟ ಡಾಲಿ ಧನಂಜಯ್ ಪ್ರತಿಕ್ರಿಯೆ ನೀಡಿದ್ದಾರೆ.