ಬೆಂಗಳೂರು: ಕಿದ್ವಾಯಿ ಆಸ್ಪತ್ರೆಯಲ್ಲಿ ರಾತ್ರಿ ಸಮಯದಲ್ಲಿ ಐಸಿಯು ನಲ್ಲಿ ವೈದ್ಯರು ಇರೋದಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ. ಆಸ್ಪತ್ರೆಯಲ್ಲಿನ ಸಿಬ್ಬಂದಿ ಮತ್ತು ವೈದ್ಯರು ಪ್ರಭಾವಿ ವ್ಯಕ್ತಿಗಳು ಮತ್ತು ಲಂಚಕೋರರಿಗೆ ಆದ್ಯತೆಯ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಆರೋಪ ಕೇಳಿ ಬಂದಿದೆ.
ವೈದ್ಯಕೀಯ ವರದಿಗಳನ್ನು ನೀಡಲು ಒಂದು ತಿಂಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದಾರೆ. ಬಾಯಿಯ ಕ್ಯಾನ್ಸರ್ಗೆ ಚಿಕಿತ್ಸೆ ಪಡೆಯಲು ನಾನು ಸುಮಾರು 2 ತಿಂಗಳು ಕಾಯುತ್ತಿದ್ದೆ. ಅಲ್ಲದೆ, ಆಸ್ಪತ್ರೆಯಲ್ಲಿ ಸರಿಯಾದ ಮೂಲಸೌಕರ್ಯಗಳ ಕೊರತೆಯಿದೆ ರೋಗಿಯೊಬ್ಬರು ದೂರಿದ್ದಾರೆ. ಇನ್ನೂ ಆಸ್ಪತ್ರೆ ಆವರಣದ ಬಳಿ ಕಸದ ರಾಶಿ ಮತ್ತು ಎಂಎನ್ಸಿಯಿಂದ ನೀಡಲಾದ ವಸತಿ ನಿಲಯದ ಅವ್ಯವಸ್ಥೆಯ ಬಗ್ಗೆ ಇತರ ದೂರುಗಳು ಸಹ ಕೇಳಿಬಂದವು.