ಬೆಂಗಳೂರು: ಕ್ವಾರಿಯಲ್ಲಿ ಈಜಲು ಹೋದ ಇಬ್ಬರು ಬಾಲಕರು ನೀರುಪಾಲಾಗಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ನಗರದ ಹೆಬ್ಬಗೋಡಿಯ ಹುಲಿಮಂಗಲದ ಕ್ವಾರಿಯಲ್ಲಿ ಘಟನೆ ಜರುಗಿದೆ. 12 ವರ್ಷದ ಹಾಸನ ಮೂಲದ ತೀರ್ತೇಶ್ ಹಾಗೂ 14 ವರ್ಷದ ಫೈಸಲ್ ಖಾನ್ ಮೃತ ಬಾಲಕರು ಎಂದು ಗುರುತಿಸಲಾಗಿದೆ.
ಮೃತರು, ಎಲೆಕ್ಟ್ರಾನಿಕ್ ಸಿಟಿ ಬಳಿಯ ಮಾರಗೊಂಡನ ಹಳ್ಳಿ ಯಲ್ಲಿ ವಾಸವಾಗಿದ್ದರು. ನೆನ್ನೆ ಸಂಜೆ 5 ಗಂಟೆಯಲ್ಲಿ ಹೆಬ್ಬಗೋಡಿಯ ಹುಲಿಮಂಗಲದ ಕ್ವಾರಿಯಲ್ಲಿ ಈಜಲು ಬಂದಿದ್ದರು. ಈ ವೇಳೆ ಅವರು ನೀರು ಪಾರಾಗಿದ್ದಾರೆ. ಇನ್ನೂ ಮೃತ ದೇಹಗಳಿಗೆ ಅಗ್ನಿಶಾಮಕ ದಳದ ಸಿಬ್ಬಂದಿ, ಶೊಧ ಕಾರ್ಯ ನಡೆಸುತ್ತಿದ್ದು, ಹೆಬ್ಬಗೋಡಿ ಪೋಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
9008568033