9 ವರ್ಷದ ಬಾಲಕ ಏಕಾಏಕಿ ಕಾಣೆಯಾಗಿದ್ದು, ಮಗನಿಗಾಗಿ ಕುಟುಂಬಸ್ಥರು ಕಣ್ಣೀರಲ್ಲಿ ಕೈತೊಳೆಯುತ್ತಿರುವ ಘಟನೆ ಗದಗನಲ್ಲಿ ನಡೆದಿದೆ. ಗದಗ ನಗರದ ಹೊಂಬಳ ನಾಕಾ ಬಳಿ ಜನತಾ ಜಾಲೋನಿಯ ಬಾಲಕ ಅಫ್ಜಲ್ ಮೌಲಾಸಾಬ್ ದಾವಲಖಾನವರ್ ಎಂಬ ಈ ಪುಟ್ಟ ಬಾಲಕ ನಾಪತ್ತೆಯಾಗಿದ್ದಾನೆ. ಮೌಲಾಸಾಬ್ ಹಾಗೂ ಖಾಜಾಬಿ ದಂಪತಿಗೆ ಏಕೈಕ ಗಂಡು ಮಗ. 3ನೇ ತರಗತಿ ಓದುತ್ತಿದ್ದು, ಶಾಲೆ ಮುಗಿಸಿಕೊಂಡು ಸಾಯಂಕಾಲ ಮನೆಗೆ ಬಂದಿದ್ದಾನೆ. ಮನೆಯಲ್ಲಿ ಸ್ಕೂಲ್ ಬ್ಯಾಗ್ ಇಟ್ಟು ಮಾವಿನ ಹಣ್ಣು ತೆಗೆದುಕೊಂಡು ಆಟವಾಡಲು ಹೋಗಿದ್ದಾನೆ. ಹೋದ ಮಗ ಮತ್ತೆ ಮನೆಗೆ ಹಿಂತುರುಗಿಲ್ಲ. ಕುಟುಂಬಸ್ಥರು ನಿನ್ನೆ ರಾತ್ರಿಯಿಂದ ಅನೇಕ ಕಡೆಗಳಲ್ಲಿ ಹುಡುಕಾಡಿದ್ರೂ ಎಲ್ಲೂ ಪತ್ತೆಯಾಗ್ತಿಲ್ಲ.
ಮಗುವಿನ ಫೋಟೋ ಹಿಡಿದುಕೊಂಡು ಕಣ್ಣೀರಿಡುತ್ತಾ ಬೀದಿ ಬೀದಿ ಅಲೆಯುತ್ತಿದ್ದಾರೆ. ಒಬ್ಬನೇ ಗಂಡು ಮಗು ದಯವಿಟ್ಟು ಹುಡುಕಿಕೊಡಿ ಅಂತ ಅಂಗಲಾಚುತ್ತಾ, ಕಣ್ಣೀರಿಡುತ್ತಾ ಅಲೆಯುತ್ತಿದ್ದಾರೆ. ಕುಟುಂಬಸ್ಥರು ಆಕ್ರಂದನ ಮುಗಿಲು ಮುಟ್ಟಿದೆ. ಮಗುವಿನ ಫೋಟೋ, ಸ್ಕೂಲ್ ಬ್ಯಾಗ್, ಡ್ರೆಸ್ ಹಿಡಿದುಕೊಂಡು ಗೋಳಾಡುತ್ತಿದ್ದಾರೆ. ಈ ಕುರಿತು ಗದಗ ಶಹರ ಪೊಲೀಸ್ ಠಾಣೆಯಲ್ಲೂ ಮಿಸ್ಸಿಂಗ್ ದೂರು ದಾಖಲಾಗಿದೆ. ಅನೇಕ ಕಡೆಗಳಲ್ಲಿ ಪೊಲೀಸರು ಸಿಸಿ ಟಿವಿ ದೃಶ್ಯಗಳನ್ನು ಹುಡುಕುತ್ತಿದ್ದಾರೆ. ನಿನಗಾಗಿ ಕುಟುಂಬ ಕಾಯುತ್ತಿದೆ ಬೇಗ ಬಾ ಮಗ ಅಂತ ಕುಟುಂಬಸ್ಥರು ಹಂಬಲಿಸುತ್ತಿರುವುದುನ್ನು ನೋಡಿದ್ರೆ ಕರಳು ಹಿಂಡುವಂತಿದೆ.