ರಾಯಚೂರು : ತಂದೆ-ಮಗ ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ರಾಯಚೂರು ತಾಲೂಕಿನ ಕೊರ್ತಕುಂದಾ ಗ್ರಾಮದಲ್ಲಿ ನಡೆದಿದೆ. ತಂದೆ ಸಲೀಂ (32) ಮಗ ರಾಜ(12) ಸಾವನ್ನಪ್ಪಿದ್ದು, ಊರಿನ ಕೆರೆ ಹತ್ರ ಉದ್ಯೋಗ ಖಾತ್ರಿ ಕೆಲಸದಲ್ಲಿ ತಂದೆ ಸಲೀಂ ತೊಡಗಿದ್ದರು.
ಇದೇ ವೇಳೆ ಕೆರೆಯಲ್ಲಿ ನೀರು ಕುಡಿಯಲು ಹೋಗಿ ಕಾಲು ಜಾರಿ ಬಿದ್ದ ಮಗನನ್ನು ಉಳಿಸಲು ಹೋದ ತಂದೆ ಸಲೀಂ ಸಹ ಕೆರೆ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇನ್ನೂ ಈ ಘಟನೆ ಸಂಬಂಧ ರಾಯಚೂರು ತಾಲೂಕಿನ ಯಾಪಲ್ದಿನ್ನಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.