ಕೋಲಾರ: ರಾಜಕೀಯ ವೈಷಮ್ಯ ಹಾಗೂ ಹಳೆ ದ್ವೇಷ ಹಿನ್ನಲೆ ಮೂರುವರೇ ಎಕರೆಯಲ್ಲಿ 165 ಗಿಡಗಳನ್ನು ಕಡಿದ ನಾಶಮಾಡಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ರೋಣೂರು ಹೋಬಳಿಯ ಈಜುಕುಂಟೆ ಗ್ರಾಮದಲ್ಲಿ ನಡೆದಿದೆ. ರೈತ ವೆಂಕಟೇಶ್’ಗೆ ಸೇರಿದ ಜಮೀನಾಗಿದ್ದು,
ದರಖಾಸ್ತು ಜಮೀನಲ್ಲಿ ಅರ್ಜಿ ಸಲ್ಲಿಸಿ ಮಾವು ಗಿಡಗಳನ್ನು ನೆಟ್ಟಿದ್ದರು. ಕಿಡಿಗೇಡಿಗಳಿಂದ ಮೂರನೇ ಬಾರೀಗೆ ಮಾವಿನ ಗಿಡಗಳ ನಾಶವಾಗಿದೆ. ಆದ್ದರಿಂದ ರೈತ ವೆಂಕಟೇಶ್ ನ್ಯಾಯ ಕೊಡಿಸುವಂತೆ ಪೊಲೀಸರ ಮೊರೆ ಹೋಗಿದ್ದಾರೆ. ಇನ್ನೂ ಈ ಘಟನೆ ಸಂಭಂಧ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.