ಬೆಂಗಳೂರು: 5 ಗ್ಯಾರಂಟಿ ಯೋಜನೆ ಜಾರಿ ಮಾಡಿಯೇ ಮಾಡುತ್ತೇವೆಂದು ಸಿಎಂ ಸಿದ್ದರಾಮಯ್ಯ ಶಪಥ ಮಾಡಿದ್ದಾರೆ. ಹೀಗಾಗಿ ಆದಾಯಕ್ಕಾಗಿ ಕಂದಾಯ ಇಲಾಖೆ ಮೇಲೆ ರಾಜ್ಯ ಸರ್ಕಾರ ಕಣ್ಣಿಟ್ಟಿದೆ.
ನೊಂದಣಿ, ಸ್ಟ್ಯಾಪ್ ಡ್ಯುಟಿ ಹೆಚ್ಚಳ ಮಾಡುವ ಬಗ್ಗೆ ಚಿಂತನೆ ನಡೆದಿದೆ. ಆಸ್ತಿಗಳ ಗೈಡಲೆನ್ಸ್ ವಾಲ್ಯೂವ್ ಹೆಚ್ಚಳದ ಬಗ್ಗೆ ಚಿಂತನೆ ನಡೆದಿದೆ. ಕಂದಾಯ, ಅಬಕಾರಿ, ನೋಂದಣಿ ಇಲಾಖೆಯಲ್ಲಿ ಹಣ ಸೋರಿಕೆಗೆ ಕ್ರಮ ವಹಿಸುವಂತೆ, ಇಲಾಖೆಯಲ್ಲಿ ಅನಗತ್ಯ ಹಣ ಸೋರಿಕೆ ತಡೆಗಟ್ಟುವಿಕೆಗೆ ತಿರ್ಮಾನ ಮಾಡಲಾಗಿದೆ.
ರಾಜ್ಯದಲ್ಲಿ ಮುರುಳು ಪರವಾನಿಗೆ ಸೇರಿದಂತೆ ಹೊಸ ಸುಲ್ಕ ನಿಗದಿ ಮಾಡುವ ಸಾಧ್ಯತೆ ಇದೆ. ಅಬಕಾರಿ ಇಲಾಖೆಯಲ್ಲಿ ನೂತನ ಮಾದರಿಯ ಆದಾಯಕ್ಕೆ ಪ್ಲ್ಯಾನ್ ಮಾಡಲಾಗಿದೆ ಎಂಬ ಮಾಹಿತಿ ಸಿಕ್ಕಿದೆ.