ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಫ್ರೀ ಬಸ್ ಸ್ಕೀಂನಿಂದ ನಮ್ಮ ಮೆಟ್ರೋಗೆ ಸಂಕಷ್ಟದ ಭೀತಿ ಶುರುವಾಗಿದೆ. ಸರ್ಕಾರದ ನೂತನ ಮಹಿಳಾ ಫ್ರೀ ಬಸ್ ಯೋಜನೆಯಿಂದ ಮೆಟ್ರೋ ಮಹಿಳಾ ಪ್ರಯಾಣಿಕರನ್ನ ಕಸಿಯಲಿದೆ. ಫ್ರೀ ಬಸ್ ಸ್ಕೀಂ ಜಾರಿಯಿಂದ BMRCL ತುಂಬಾ ತಲೆಕೆಡಿಸಿಕೊಂಡಿದೆ.
ಇನ್ನೂ ಈಗಾಗಲೇ ನಷ್ಟದಲ್ಲಿರುವ ನಮ್ಮ ಮೆಟ್ರೋ ನಿಗಮಕ್ಕೆ ಫ್ರೀ ಬಸ್ ಸ್ಕೀಂ ಸಂಕಟ ತಂದೊಡ್ಡಿದೆ. ನಿತ್ಯ ಬೆಂಗಳೂರು ಮೆಟ್ರೋದಲ್ಲಿ 2.5 ಲಕ್ಷ ಮಹಿಳಾ ಪ್ರಯಾಣಿಕರು ಓಡಾಟ ನಡೆಸುತ್ತಿದ್ದಾರೆ. ಆದರೆ ಇನ್ಮೇಲೆ ಬಿಎಂಟಿಸಿ ಬಸ್ ನಲ್ಲಿ ಮಹಿಳೆಯರಿಗೆ ಉಚಿತ ಸೇವೆ ಕಲ್ಪಿಸಿದ್ರೆ ಹೆಚ್ಚಿನ ಮೆಟ್ರೋ ಪ್ರಯಾಣಿಕರು ಬಿಎಂಟಿಸಿ ಬಸ್ ಕಡೆ ಮುಖ ಮಾಡೋ ಸಾಧ್ಯತೆ ಇದೆ.
ಮೆಟ್ರೋ ನೇರಳೆ ಹಾಗೂ ಹಸಿರು ಮಾರ್ಗದಲ್ಲಿ ಮೆಟ್ರೋ ಪ್ರಯಾಣಿಕರು ಬಿಎಂಟಿಸಿಗೆ ಹತ್ತೋ ಆತಂಕ ಶುರುವಾಗಿದೆ. ಶೇ ,20-30 ರಷ್ಟು ಪ್ರಯಾಣಿಕರು ಬಿಎಂಟಿಸಿ ಕಡೆ ಮುಖ ಮಾಡೋ ಸಾಧ್ಯತೆ ಎದುರಾಗಿದೆ.
ಮಹಿಳಾ ಪ್ರಯಾಣಿಕರನ್ನು ಸೆಳೆಯಲು ಪ್ರತ್ಯೇಕ ಮಹಿಳಾ ಬೋಗಿಗಳನ್ನ BMRCL ನಿರ್ಮಿಸಿದ್ದು, ಆದ್ರೆ ಇದೀಗ ಮಹಿಳಾ ಪ್ರಯಾಣಿಕರು ಕಸಿಯುವ ಆತಂಕವನ್ನು ಬೆಂಗಳೂರು ಮೆಟ್ರೋ ನಿಗಮದ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.