ಬೆಂಗಳೂರು: ಫ್ರೀ ಕೋರ್ಸ್ ಹೆಸರಲ್ಲಿ ಬೆಂಗಳೂರಿನಲ್ಲಿ ಕೋಟ್ಯಾಂತರ ರೂ ವಂಚನೆ ಮಾಡಿರುವುದಾಗಿ ವರದಿಯಾಗಿದೆ. ಫ್ರೀ ಕೋರ್ಸ್ ಹೆಸರಲ್ಲಿ ಕೋಟ್ಯಾಂತರ ರೂ ವಂಚನೆ ಮಾಡಿರುವ ಸಂಬಂಧ ಆಂದ್ರ ಪ್ರದೇಶ ಮೂಲಕ ಶ್ರೀನಿವಾಸುಲು ಬಂಧಿಸಲಾಗಿದೆ. ಡೇಟಾ ಸೈನ್ಸ್ ಅನಲೈಸ್ ಹೆಸರಿನಲ್ಲಿ ಕೊರ್ಸ್ ಇತ್ತು ವಿದ್ಯಾರ್ಥಿಗಳನ್ನು ಪಾಲಕರನ್ನು ಈ ಕೋರ್ಸ್ಗೆ ಸೇರಿಕೊಳ್ಳುವಂತೆ ನಂಬಿಸಲಾಗುತ್ತಿತ್ತು.
ಜಯನಗರದಲ್ಲಿ ಎಜುಕೇಶನ್ ಸೆಂಟರ್ ಕೂಡಾ ಆರೋಪಿ ತೆರೆದಿದ್ದ. ಗೀಕ್ ಲರ್ನ್ ಎಜುಕೇಶನ್ ಇನ್ಸ್ಟಿಟ್ಯೂಟ್ ಎಂಬ ಹೆಸರಿನಲ್ಲಿ ಸೆಂಟರ್ ತೆರೆಯಲಾಗಿತ್ತು.ಸುಮಾರು ಎರಡು ಸಾವಿರದ ಐದು ನೂರು ವಿದ್ಯಾರ್ಥಿಗಳು ಸೇರಿದ್ದರು. ವಿದ್ಯಾರ್ಥಿಗಳ ಬಳಿ ದಾಖಲಾತಿ ತೆಗೆದುಕೊಂಡು ಅಡ್ಮಿಶನ್ ಮಾಡಿಸಿಕೊಳ್ಳುತಿದ್ದ ಎಂದು ಹೇಳಲಾಗಿದೆ. ನಂತರ ದಾಖಲಾತಿಗಳನ್ನು ಬಳಸಿಕೊಂಡು ಬ್ಯಾಂಕ್ ನಲ್ಲಿ ಎಜುಕೇಶನ್ ಲೋನ್ ಪಡೆದುಕೊಳ್ತಿದ್ದ.
ವಿದ್ಯಾರ್ಥಿಗಳ ಹೆಸರಿನಲ್ಲಿ ಲೋನ್ ತೆಗೆದುಕೊಂಡು ಈತ ಆ ಹಣವನ್ನು ಬಳಸಿಕೊಳ್ಳುತ್ತಿದ್ದ. ವಿದ್ಯಾರ್ಥಿಗಳ ಲೋನ್ ಅನ್ನು ಸಂಸ್ಥೆ ಅಕೌಂಟ್ಗೆ ಬರುವಂತೆ ಮಾಡಿಕೊಳ್ಳುತ್ತಿದ್ದ. ವಿದ್ಯಾರ್ಥಿಗಳಿಗೆ ಈ ಬಗ್ಗೆ ಸಂಪೂರ್ಣ ಮಾಹಿತಿ ಇರುತ್ತಿರಲಿಲ್ಲ. ಬಂದ ಹಣವನ್ನು ಎಲ್ಲವನ್ನು ತನ್ನ ಅಕೌಂಟ್ ಗೆ ಪಡೆದುಕೊಳ್ತಿದ್ದ ನಂತರ ಬ್ಯಾಂಕ್ ಲೋನ್ ಕಟ್ಟದೆ ವಂಚನೆ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಜಯನಗರ ಪೊಲೀಸ್ ಠಾಣೆ ಯಲ್ಲಿ ಕೇಸ್ ದಾಖಲು ಮಾಡಲಾಗಿದೆ. ತನಿಖೆ ವೇಳೆ ಸುಮಾರು 18 ಕೋಟಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ