ಬೆಂಗಳೂರು: ಐದು ಗ್ಯಾರಂಟಿ ಜಾರಿ ಮಾಡಲು ಷರತ್ತು ಹಾಕಿದರೆ ನಾವು ಒಪ್ಪಲ್ಲ ಎಂದು ಬೆಂಗಳೂರಿನಲ್ಲಿ ಬಿಜೆಪಿ ಎಂಎಲ್ಸಿ ಎನ್.ರವಿಕುಮಾರ್ ವಾಗ್ದಾಳಿ ನಡೆಸಿದ್ದಾರೆ. ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಕೊಟ್ಟ ಮಾತಿನಂತೆ ನಡೆಯಲಿ.
10 ಕೆಜಿ ಅಕ್ಕಿ ಕೊಡಲು ಆಗದಿದ್ರೆ ಕೇಂದ್ರದ ಬಳಿ ಕೇಳ್ತೀವಿ ಎಂದಿದ್ದಾರೆ. ನಮ್ಮಲ್ಲಿ ಆಗಲ್ಲ ಕೇಂದ್ರದ ಬಳಿ ಕೇಳ್ತೀವಿ ಅಂತಾ ಮೊದಲೇ ಹೇಳಿದ್ರಾ? 60 ಕಿ.ಮೀ.ಗೆ ಮಾತ್ರ ಉಚಿತ ಪ್ರಯಾಣ ಅಂತಾ ಷರತ್ತು ಹಾಕ್ತಿದ್ದೀರಿ.
ಈಗಾಗಲೇ ಕೆಎಸ್ಆರ್ಟಿಸಿ ನಷ್ಟದಲ್ಲಿದೆ ಎಂದು ಎನ್.ರವಿಕುಮಾರ್ ಹೇಳಿದರು. ಕೆಎಸ್ಆರ್ಟಿಸಿ ಬಸ್ ಪಂಕ್ಚರ್, ಡೀಸಲ್ ಹಾಕಿಸಲು ಕಾಸು ಇಲ್ಲ. ನಾಳೆ ಕ್ಯಾಬಿನೆಟ್ ಸಭೆಯ ನಿರ್ಧಾರದ ಬಳಿಕ ನಾವು ಮಾತನಾಡ್ತೇವೆ. ನೀವು ನಡೆದಂತೆ ನಡೆಯದಿದ್ರೆ ವಚನ ಭ್ರಷ್ಟರು ಅಂತಾ ಕರೆಯುತ್ತೇವೆ ಎಂದರು.