ಬೆಂಗಳೂರು: ಅತ್ತೆ, ಸೊಸೆ ನಡುವೆ ಜಗಳ ಹಚ್ಚಲು ಗ್ಯಾರಂಟಿ ಘೋಷಿಸಿದ್ದಾರೆ ಎಂದು ಬಳ್ಳಾರಿಯಲ್ಲಿ ಕಾಂಗ್ರೆಸ್ ವಿರುದ್ಧ ಸಂಸದ ದೇವೇಂದ್ರಪ್ಪ ವಾಗ್ದಾಳಿ ನಡೆಸಿದ್ದಾರೆ. ಅತ್ತೆ ನನಗೆ ಬೇಕು ಅಂತಾರೆ, ಸೊಸೆ ನನಗೆ ಹಣ ಹಾಕಿ ಅಂತಾರೆ.
ಗ್ಯಾರಂಟಿ ಹೊಡೆತಕ್ಕೆ ಮೋದಿ ಪ್ರಚಾರ ಮಾಡಿದರೂ ಸೋತೆವು. ಫ್ರೀ ಸಿಗುತ್ತೆ ಎಂದು ಎಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದ್ದಾರೆ.
ಸೋಮಾರಿತನ, ಬೆಂಕಿ ಹಚ್ಚುವುದಕ್ಕೆ ಈ ಗ್ಯಾರಂಟಿ ಯೋಜನೆ ಮಾಡಲಾಗುತ್ತಿದೆ ಎಂದು ಬಳ್ಳಾರಿಯಲ್ಲಿ ಕಾಂಗ್ರೆಸ್ ವಿರುದ್ಧ ಸಂಸದ ದೇವೇಂದ್ರಪ್ಪ ವಾಗ್ದಾಳಿ ನಡೆಸಿದರು.