ಬೆಂಗಳೂರು: ತಮಿಳುನಾಡಿನಲ್ಲಿ ಇರುವವರು ನಮ್ಮ ಅಣ್ಣತಮ್ಮಂದಿರರೂ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನ ವಿಧಾನಸೌಧದಲ್ಲಿ ಮಾತನಾಡಿದ ಅವರು, ಕರ್ನಾಟಕ ಮತ್ತು ತಮಿಳುನಾಡು ನೀರಿಗಾಗಿ ಜಗಳ ಆಡಿದ್ದು ಸಾಕು.
ಮೇಕೆದಾಟು ವಿಚಾರದಲ್ಲಿ ನಾವು ನೀರಿಗೋಸ್ಕರ ನಡೆದಿದ್ದೇವೆ. ತಮಿಳುನಾಡಿಗೆ ಯಾವುದೇ ತರಹದ ಸಮಸ್ಯೆ ಇಲ್ಲ. ನಮ್ಮ ಹೋರಾಟ ಆದ ಮೇಲೆ ಬಜೆಟ್ ನಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು 1 ಸಾವಿರ ಕೋಟಿ ರೂ. ಮೀಸಲಿಟ್ಟು ಪ್ರಸ್ತಾವನೆ ಮಾಡಿದ್ದಾರೆ.
ಅದನ್ನು ಖರ್ಚು ಮಾಡುತ್ತೇವೆ”ಎಂದರು. ನಮಗೇನು ತಮಿಳುನಾಡಿನ ಮೇಲೆ ದ್ವೇಷ ಇಲ್ಲ, ಅವರೊಂದಿಗೆ ಯುದ್ದ ಮಾಡಬೇಕೆಂದಿಲ್ಲ. ಅಲ್ಲಿರುವವರು ನಮ್ಮ ಅಣ್ಣ- ತಮ್ಮಂದಿರು. ಅಲ್ಲಿರುವವರ ಅಣ್ಣ-ತಮ್ಮಂದಿರು ಇಲ್ಲಿದ್ದಾರೆ. ಯಾರ ಮೇಲೂ ದ್ವೇಷ-ಅಸೂಯೆ ಮಾಡಬೇಕಾಗಿಲ್ಲ” ಎಂದರು.
ಮೇಕೆದಾಟು ಯೋಜನೆ ನಮ್ಮ ಯೋಜನೆ. ತಮಿಳುನಾಡಿನವರಿಗೂ ಅನುಕೂಲ ಆಗುತ್ತದೆ. ಸಮುದ್ರಕ್ಕೆ ಹೋಗುವಂತಹ ನೀರಿನಿಂದ ಅವರಿಗೂ ಅನುಕೂಲ ಆಗುತ್ತದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಎಲ್ಲಾ ರೈತರಿಗೆ ನಾವು ಸಾಹಾಯ ಮಾಡಬಹುದು.
ಬೀಗ ನಮ್ಮ ಹತ್ತಿರ ಇಲ್ಲ, ಕೇಂದ್ರ ಸರಕಾರದ ಹತ್ತಿರ ಇದೆ.ಎಷ್ಟು ನೀರನ್ನು ನಾವು ಅವರಿಗೆ ಬಿಡಬೇಕೋ ಆ ನೀರನ್ನು ನಾವು ಬಿಡಲು ಈಗಾಗಲೇ ಆದೇಶಗಳಾಗಿವೆ. ನಮ್ಮ ರಾಜ್ಯದ ರಕ್ಷಣೆ ಮಾಡುತ್ತೇವೆ. ನಮ್ಮಲ್ಲಿ ಜಲ ವಿದ್ಯುತ್ ಸ್ಥಾವರ ಮಾಡುವುದರಿಂದ ಅವರಿಗೇನಾದರೂ ನಷ್ಟವಿದೆಯಾ” ಎಂದು ಪ್ರಶ್ನಿಸಿದರು.