ಮುಂದಿನ ಲೋಕಸಭಾ, ವಿಧಾನಸಭಾ ಚನಾವಣೆಗಳಲ್ಲಿ ಬಿಜೆಪಿಯನ್ನು ಸೋಲಿಸಲು ಕರ್ನಾಟಕದ ತಂತ್ರವೇ ನಮಗೆ ಮಾದರಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ಹೇಳಿದ್ದಾರೆ. ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನ ಸಮರ್ಪಕ ಜಾರಿಗೆ ನಿರ್ಧಾರ ಮಾಡಲಾಗಿದೆ, ಈ ಮೂಲಕ ಲೋಕಾಸಭಾ ಚುನಾವಣೆಗೂ ಮುನ್ನ ರಾಜಕೀಯ ಆಡಳಿತದ ಮಾಡಲ್ ಸೃಷ್ಠಿಸಲು ಕಾಂಗ್ರೆಸ್ ಚಿಂತನೆ ನಡೆಸಿದೆ. ಬಿಜೆಪಿಯ ಗುಜರಾತ್ , ಉತ್ತರ ಪ್ರದೇಶ್ ಮಾಡೆಲ್ಗೆ ಬದಲಾಗಿ, ಕರ್ನಾಟಕ ಮಾಡೆಲ್ ರಚನೆಗೆ ಚಿಂತನೆ ನಡೆದಿದೆ.
ಉತ್ತಮ ಆಡಳಿತ ಜೊತೆ ಜೊತೆಗೆ ಸಮಾಜಿಕ ನ್ಯಾಯದ ಪರಿಕಲ್ಪನೆಯೂ ಇದೆ, ಗ್ಯಾರಂಟಿ ಯೋಜನೆಗಳ ಮೂಲಕ ಬಡವರ ಪರ ಸರ್ಕಾರ ಎಂಬ ಸಂದೇಶ ರವಾನಿಸಲು ಕಾಂಗ್ರೆಸ್ ಮುಂದಾಗಿದೆ. ಗ್ಯಾರಂಟಿ ಯೋಜನೆ ಜಾರಿ ಮೂಲಕ ಹೊಸದೊಂದು ಮಾದರಿ ಸೃಷ್ಟಿ ಮಾಡಲಾಗಿದೆ, ಈ ಮೂಲಕ ದೇಶದ ಇತರೆ ರಾಜ್ಯಗಳಿಗೆ ಸಂದೇಶ ರವಾನೆಗೆ ಯತ್ನಿಸಲಾಗುತ್ತಿದೆ.
ಅಮೆರಿಕದ ಸಾಂತಾ ಕ್ಲಾರಾದ ಕ್ಯಾಲಿಫೋರ್ನಿಯಾ ವಿವಿ ಕ್ಯಾಂಪಸ್ನಲ್ಲಿ ನಡೆದ ಸಮಾರಂಭದಲ್ಲಿ ಸಭಿಕರೊಂದಿಗೆ ಸಂವಾದ ನಡೆಸಿದ ಗಾಂಧಿ, ಬಿಜೆಪಿಯಲ್ಲಿನ ದೌರ್ಬಲ್ಯಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ಒಬ್ಬ ರಾಜಕೀಯ ನಿಪುಣನಾಗಿ ನನಗೆ ಅವರ ದೌರ್ಬಲ್ಯ ಎದ್ದು ಕಾಣುತ್ತಿವೆ. ಪ್ರತಿಪಕ್ಷಗಳು ಸರಿಯಾಗಿ ಹೊಂದಾಣಿಕೆಯಾದರೆ ಬಿಜೆಪಿಯನ್ನು ಸೋಲಿಸಬಹುದು ಎಂದರು.