ವ್ಯಾಟಿಕನ್ ಸಿಟಿಯ ಸೇಂಟ್ ಪೀಟರ್ಸ್ ಚರ್ಚ್ ನಲ್ಲಿ ವ್ಯಕ್ತಿಯೊಬ್ಬರು ಬೆತ್ತಲಾಗಿ ಕಾಣಿಸಿಕೊಂಡಿದ್ದು, ಆತನ ವಿರುದ್ಧ ಪ್ರಕರಣ ದಾಖಲಾಗಿದೆ. ಉಕ್ರೇನ್ ಯುದ್ಧದ ವಿರುದ್ಧ ಪ್ರತಿಭಟಿಸಲು ಆತ ಈ ರೀತಿಯಲ್ಲಿ ವರ್ತಿಸಿದ್ದಾನೆ ಎಂದು ಹೇಳಲಾಗುತ್ತಿದೆ.
ವ್ಯಕ್ತಿಯು ಚರ್ಚ್ನ ಬಲಿಪೀಠದ ಬಳಿ ತನ್ನ ಬಟ್ಟೆಗಳನ್ನು ತೆಗೆದಿದ್ದಾನೆ. ಬಳಿಕ ಈತನನ್ನು ನೋಡಿದ ಚರ್ಚ್ನ ಭದ್ರತಾ ಸಿಬ್ಬಂದಿ ಇಟಲಿ ಪೊಲೀಸರಿಗೆ ಒಪ್ಪಿಸಿದ್ದಾರೆ.ವ್ಯಕ್ತಿಯೂ ತನ್ನ ಬೆನ್ನಿನ್ನ ಮೇಲೆ ಉಕ್ರೇನ್ನ ಮಕ್ಕಳನ್ನು ಉಳಿಸಬೇಕು ಎಂದು ಬರೆದುಕೊಂಡಿದ್ದಾನೆ.
ಘಟನೆಯ ಕುರಿತು ಇಟಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 2016ರ ಹಿಂದೆ ಲೂಯಿಸ್ ಕಾರ್ಲೋಸ್ ಜಿಯಾಂಪೊಲಿ ಎಂಬುವವರು ಸಹ ವ್ಯಾಟಿಕನ್ನ ಸೇಂಟ್ ಪೀಟರ್ಸ್ ಚರ್ಚ್ ಅನ್ನು ಬೆತ್ತಲೆಯಾಗಿ ಪ್ರವೇಶಿಸಿದ್ದನು. ಅವರು ಬ್ರೆಜಿಲ್ ನಿವಾಸಿಯಾಗಿದ್ದರು. ತನಿಖೆಯ ವೇಳೆ ಆರೋಪಿಯ ಮಾನಸಿಕ ಸಮತೋಲನ ಸರಿಯಿಲ್ಲ ಎಂದು ತಿಳಿದುಬಂದಿದೆ. ಆ ಬಳಿಕ ನಡೆದ ಮತ್ತೊಂದು ಪ್ರಕರಣ ಇದಾಗಿದೆ.