ಬೆಂಗಳೂರು: ಒಡಿಶಾದ ಬಾಲಸೋರ್ ಬಳಿ ಶುಕ್ರವಾರ ಸಂಜೆ ನಡೆದ ಭೀಕರ ರೈಲು ಸರಣಿ ಅಪಘಾತ ಸಂಭವಿಸಿದೆ. ಮೃತಪಟ್ಟವರ ಸಂಖ್ಯೆ 237 ಕ್ಕೆ ಏರಿಕೆಯಾಗಿದೆ. 900 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಆದರೆ ಅದೃಷ್ಟವಶಾತ್, ಯಶವಂತಪುರ-ಹೌರಾ ರೈಲಿನಲ್ಲಿದ್ದ 110 ಕನ್ನಡಿಗರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಚಿಕ್ಕಮಗಳೂರಿನ ನಿವಾಸಿಗಳಾಗಿರುವ 110 ಕ್ಕೂ ಹೆಚ್ಚು ಕನ್ನಡಿಗರು, ಜೈನ ತೀರ್ಥ ಕ್ಷೇತ್ರವಾದ ಜಾರ್ಖಂಡ್ನ ಸಮ್ಮೇದ ಶಿಖರ್ಜಿಗೆ ಯಶವಂತಪುರ-ಹೌರಾ ಎಕ್ಸ್ಪ್ರೆಸ್ ರೈಲಿನಲ್ಲಿ ಬೆಂಗಳೂರಿನಿಂದ ಹೊರಟಿದ್ದರು. ಬಾಲಸೋರ್ನಲ್ಲಿ ಸರಣಿ ಅಪಘಾತದ ವೇಳೆ, ಯಶವಂತಪುರ-ಹೌರಾ ರೈಲಿನ ಕೊನೇಯ ಮೂರು ಬೋಗಿಗಳಿಗೂ ಮತ್ತೊಂದು ಟ್ರೈನ್ ಡಿಕ್ಕಿ ಹೊಡೆದ ಪರಿಣಾಮ, ಈ ಬೋಗಿಗಳು ಕಳಚಿ ಸುಮಾರು ಒಂದುವರೆ ಕಿ.ಮೀ ದೂರಕ್ಕೆ ಉಳಿದಿದೆ. ಈ ಬೋಗಿಗಳಿದ್ದ ಪ್ರಯಾಣಿಕರಲ್ಲಿ ಹಲವರು ಗಾಯಗೊಂಡಿದ್ದಾರೆ, ಮೃತಪಟ್ಟಿದ್ದಾರೆ, ತಕ್ಷಣ ಸ್ಥಳೀಯರೆಲ್ಲ ಓಡಿ ಬಂದು ರಕ್ಷಣೆಗಿಳಿದಿದ್ದಾರೆ ಎಂದು ರೈಲಿನಲ್ಲಿ ಅಪಘಾತದಿಂದ ಬಚಾವಾದ ಕನ್ನಡಿಗರು ವಿವರಿಸಿದ್ದಾರೆ. ಸ್ವಲ್ಪ ಹೊತ್ತಿನ ಬಳಿಕ 12-30 ರವೇಳೆಗೆ ಯಶವಂತಪುರ- ಹೌರಾ ರೈಲು ಮತ್ತೆ ಪ್ರಯಾಣ ಮುಂದುವರಿಸಿದೆ ಎಂದು ಅವರು ತಿಳಿಸಿದ್ದಾರೆ. ಬೆಂಗಳೂರು: ಒಡಿಶಾದ ಬಾಲಸೋರ್ ಬಳಿ ಶುಕ್ರವಾರ ಸಂಜೆ ನಡೆದ ಭೀಕರ ರೈಲು ಸರಣಿ ಅಪಘಾತ ಸಂಭವಿಸಿದೆ. ಮೃತಪಟ್ಟವರ ಸಂಖ್ಯೆ 237 ಕ್ಕೆ ಏರಿಕೆಯಾಗಿದೆ. 900 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಆದರೆ ಅದೃಷ್ಟವಶಾತ್, ಯಶವಂತಪುರ-ಹೌರಾ ರೈಲಿನಲ್ಲಿದ್ದ 110 ಕನ್ನಡಿಗರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಚಿಕ್ಕಮಗಳೂರಿನ ನಿವಾಸಿಗಳಾಗಿರುವ 110 ಕ್ಕೂ ಹೆಚ್ಚು ಕನ್ನಡಿಗರು, ಜೈನ ತೀರ್ಥ ಕ್ಷೇತ್ರವಾದ ಜಾರ್ಖಂಡ್ನ ಸಮ್ಮೇದ ಶಿಖರ್ಜಿಗೆ ಯಶವಂತಪುರ-ಹೌರಾ ಎಕ್ಸ್ಪ್ರೆಸ್ ರೈಲಿನಲ್ಲಿ ಬೆಂಗಳೂರಿನಿಂದ ಹೊರಟಿದ್ದರು. ಬಾಲಸೋರ್ನಲ್ಲಿ ಸರಣಿ ಅಪಘಾತದ ವೇಳೆ, ಯಶವಂತಪುರ-ಹೌರಾ ರೈಲಿನ ಕೊನೇಯ ಮೂರು ಬೋಗಿಗಳಿಗೂ ಮತ್ತೊಂದು ಟ್ರೈನ್ ಡಿಕ್ಕಿ ಹೊಡೆದ ಪರಿಣಾಮ, ಈ ಬೋಗಿಗಳು ಕಳಚಿ ಸುಮಾರು ಒಂದುವರೆ ಕಿ.ಮೀ ದೂರಕ್ಕೆ ಉಳಿದಿದೆ. ಈ ಬೋಗಿಗಳಿದ್ದ ಪ್ರಯಾಣಿಕರಲ್ಲಿ ಹಲವರು ಗಾಯಗೊಂಡಿದ್ದಾರೆ, ಮೃತಪಟ್ಟಿದ್ದಾರೆ, ತಕ್ಷಣ ಸ್ಥಳೀಯರೆಲ್ಲ ಓಡಿ ಬಂದು ರಕ್ಷಣೆಗಿಳಿದಿದ್ದಾರೆ ಎಂದು ರೈಲಿನಲ್ಲಿ ಅಪಘಾತದಿಂದ ಬಚಾವಾದ ಕನ್ನಡಿಗರು ವಿವರಿಸಿದ್ದಾರೆ. ಸ್ವಲ್ಪ ಹೊತ್ತಿನ ಬಳಿಕ 12-30 ರವೇಳೆಗೆ ಯಶವಂತಪುರ- ಹೌರಾ ರೈಲು ಮತ್ತೆ ಪ್ರಯಾಣ ಮುಂದುವರಿಸಿದೆ ಎಂದು ಅವರು ತಿಳಿಸಿದ್ದಾರೆ.
“ಇಂಜಿನ್ ಬದಲಾಗಿದ್ದರಿಂದ ಪ್ರಾಣ ಉಳಿಯಿತು”
ಕೋಲ್ಕತ್ತಾಗೆ ತಲುಪಲು 3 ಗಂಟೆ ಬಾಕಿ ಇದ್ದ ಸಂದರ್ಭದಲ್ಲಿ ಈ ಅಪಘಾತ ನಡೆದಿದೆ. “ನಿಜವಾಗಿ ಅಪಘಾತಕ್ಕೆ ಒಳಗಾದ ಕೊನೇಯ ಮೂರು ಬೋಗಿಯಲ್ಲಿ ಆರಂಭದಲ್ಲಿ ನಾವೇ ಇದ್ದೆವು. ವಿಶಾಖಪಟ್ಟಣಂ ನಲ್ಲಿ ಎಂಜಿನ್ ಬದಲಾಗಿ, ಹಿಂದೆ ಇದ್ದವರು ಮುಂದೆ ಬಂದೆವು. ಹೀಗಾಗಿ 110 ಜನವೂ ಮುಂದೆ ಬಂದೆವು. ವಿಶಾಖಪಟ್ಟಣದಲ್ಲಿ ರೈಲಿನ ಬೋಗಿ ಬದಲಾಗದೆ ಹೋಗಿದ್ದಲ್ಲಿ, ನಾವೇ ರೈಲಿನ ಹಿಂಬದಿಯ ಬೋಗಿಗಳಲ್ಲಿ ಇರುತ್ತಿದ್ದೆವು. ಮುಂದೆ ಬಂದು ಬಚಾವಾದೆವು ಎಂದು ವೀಡಿಯೋನಲ್ಲಿ ತಿಳಿಸಿದ್ದಾರೆ.
ಸುಮಾರು 8-40 ರ ವೇಳೆಗೆ, ರೈಲಿನಲ್ಲಿ ಬ್ರೇಕ್ ಹಾಕಿದರು. ಇದು ಸಾಮಾನ್ಯ ಬ್ರೇಕ್ ರೀತಿಯೇ ಇತ್ತು. ಆದರೆ ಹಿಂಬದಿಯಲ್ಲಿ ಅಪಘಾತ ಜೋರಾಗಿಯೇ ನಡೆದಿತ್ತು. ನಂತರ ನಮ್ಮ ಪ್ರಯಾಣಿಕರಲ್ಲಿ 50 ಕ್ಕೂ ಹೆಚ್ಚು ಮಂದಿ ವಯಸ್ಸಾದವರೇ ಇದ್ದರು. ಅವರನ್ನು ಹೇಗೆ ಶಿಫ್ಟ್ ಮಾಡಬೇಕೆಂದು ರೈಲ್ವೆ ಇಲಾಖೆಯವರ ಜೊತೆ ಮಾತುಕತೆ ನಡೆಯಿತು. ನಂತರ ಇದೇ ರೈಲನ್ನು ಮುಂದುವರಿಸಲು ನಿರ್ಧಾರ ಮಾಡಲಾಯಿತು ಎಂದು ಕನ್ನಡಿಗರೊಬ್ಬರು ವಿವರಿದ್ದಾರೆ