ಇಂದು (ಜೂನ್ 3) ತಾರೀಕು ವಿಶ್ವ ಸೈಕಲ್ ಅಥವಾ ಬೈಸಿಕಲ್ ದಿನವನ್ನು ಆಚರಿಸಲಾಗುತ್ತಿದೆ. ಸೈಕಲ್ ತುಳಿಯುವುದರಿಂದ ಎಲ್ಲಾ ವಯಸ್ಸಿನವರ ಆರೋಗ್ಯ ವೃದ್ಧಿಸುತ್ತದೆ ಎಂದು ತಜ್ಞರು ಹೇಳಿದ್ದಾರೆ. ವಿಶ್ವ ಸಂಸ್ಥೆ ಗೊತ್ತುಪಡಿಸಿದ ಈ ದಿನವನ್ನು ವಿಶ್ವ ಸೈಕಲ್ ದಿನ ಎಂದು ಆಚರಿಸಲಾಗುತ್ತದೆ. ಕಡಿಮೆ ಖರ್ಚಿನಲ್ಲಿ ಪ್ರಯಾಣದ ಜತೆ ನಮ್ಮ ಉತ್ತಮ ಆರೋಗ್ಯವನ್ನು ಪಡೆಯಲು ಇರುವ ಒಂದೇ ಒಂದು ವಾಹನವಿದು.
ಕೊರೊನಾ ವ್ಯಾಪಕವಾಗಿ ಹರಡುತ್ತಿದ್ದಂತೆಯೇ ಲಾಕ್ಡೌನ್ ಜಾರಿಗೊಳಿಸಲಾಗಿದೆ. ಎಲ್ಲರೂ ಮನೆಯಲ್ಲಿಯೇ ಸಿಲುಕಿಕೊಂಡಿರುವ ಪರಿಸ್ಥಿತಿ ಎದುರಾಯಿತು. ಹೀಗಿರುವಾಗ ಜನರು ಮಾನಸಿಕ ಸಮಸ್ಯೆ, ಕೀಲು ನೋವು, ಬೊಜ್ಜು ಉಂತಾದ ಸಮಸ್ಯೆಗಳಿಗೆ ಒಳಗಾಗಿರಬಹುದು. ದೇಹದ ತೂಕವೂ ಹೆಚ್ಚಾಗಿರಬಹುದು. ಹೀಗಿರುವಾಗ ಇನ್ನೇಕೆ ತಡ? ನಿಮ್ಮ ಮನೆಯ ಅಂಗಳದಲ್ಲಿಯೇ ಸೈಕಲ್ ತುಳಿದರೂ ಸಾಕು. ಅದೆಷ್ಟೋ ಆರೋಗ್ಯ ಸಮಸ್ಯೆಗಳಿಂದ ಹೊರಬರಬಹುದು.
ವಿಶ್ವ ಸೈಕಲ್ ದಿನವನ್ನು ಏಕೆ ಆಚರಿಸಲಾಗುತ್ತದೆ? ಕಡಿಮೆ ಪರಿಸರ ಮಾಲಿನ್ಯ ಸೈಕಲ್ ಯಾವುದೇ ವಿಷಕಾರಕ ಅನಿಲವನ್ನು ಹೊರಸೂಸುವುದಿಲ್ಲ. ಸೈಕಲ್ ಪರಿಸರ ಸ್ನೇಹಿ. ದೇಹದ ಆರೋಗ್ಯವನ್ನೂ, ಮಾನಸಿಕ ಸದೃಢತೆಯ ಜತೆಗೆ ಸುತ್ತಮುತ್ತಲಿನ ವಾತಾವಣಕ್ಕೂ ಯಾವುದೇ ಹಾನಿ ಮಾಡದೇ ಸುರಕ್ತಿತವಾಗಿ ಪ್ರಯಾಣ ಕೈಗೊಳ್ಳಬಹುದಾದ ಸಾಧನವೇ ಸೈಕಲ್.
ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಹಾಯಕ
ಸೈಕಲ್ ತುಳಿಯುವುದರಿಂದ ಉತ್ತಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು. ದೇಹದ ಎಲ್ಲಾ ಸ್ನಾಯುಗಳ ಸದೃಢತೆಗೆ ಉತ್ತ ಮಾರ್ಗವೆಂದರೆ ವಾಕಿಂಗ್ ಮತ್ತು ಸೈಕಲಿಂಗ್. ಬೆಳಿಗ್ಗೆಯಿಂದ ಸಂಜೆಯವರೆಗೆ ಕೆಲಸ ಮಾಡಿ ಮಾನಸಿಕ ಒತ್ತಡಕ್ಕೆ ಸಿಲುಕಿರುತ್ತೀರಿ ಎಂದಾದರೆ ಒಮ್ಮೆ ಸೈಕ್ಲಿಂಗ್ ಮಾಡಿ, ಮಾನಸಿಕ ನೆಮ್ಮದಿ ಪಡೆಯಲು ಸೈಕ್ಲಿಂಗನ್ನಷ್ಟು ಒಳ್ಳೆಯ ಮಾರ್ಗ ಮತ್ತೊಂದಿಲ್ಲ.
ಹಣವನ್ನು ಉಳಿಸುತ್ತದೆ
ಸೈಕ್ಲಿಂಗ್, ಉಚಿತ ಹಾಗೂ ಒತ್ತಡ ರಹಿತ ಪ್ರಯಾಣವಾಗಿದೆ. ಸೈಕಲ್ ಖರೀದಿಸುವ ಖರ್ಚು ಬಿಟ್ಟರೆ ಇನ್ನಿತರ ದೊಡ್ಡ ಖರ್ಚು ಯಾವುದೂ ಇಲ್ಲ. ಯಾವುದೇ ಇಂಧನದ ಬಳಕೆ ಇಲ್ಲದಿರುವುದರಿಂದ ಅದಕ್ಕೊಂದಿಷ್ಟು ಹಣ ಸುರಿಯುವ ಜಂಜಾಟವಿರುವುದಿಲ್ಲ. ದಿನವಿಡೀ ಚಟುವಟಿಕೆಯಿಂದಿರಲು ಹಾಗೂ ಮಾನಸಿಕ ಸದೃಢತೆಯ ಜತೆ ನೆಮ್ಮದಿ ಕಂಡುಕೊಳ್ಳಲು ಸೈಕಲಿಂಗ್ ಅತ್ಯತ್ತಮ ಮಾರ್ಗವಾಗಿದೆ. ಕೇವಲ ಇವಿಷ್ಟೇ ಅಲ್ಲದೇ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸೈಕಲ್ ಮಹತ್ವದ್ದಾಗಿದೆ. ಹೀಗಿರುವಾಗ ಸೈಕಲಿಂಗ್ನಿಂದ ಏನೇನು ಪ್ರಯೋಜನಗಳು ಎಂಬ ಕುರಿತಾಗಿ ತಿಳಿಯೋಣ.
ಕಾಲುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ
ಸೈಕ್ಲಿಂಗ್ ನಿಮ್ಮ ಕೆಳಗಿನ ದೇಹದ ಒಟ್ಟಾರೆ ಕಾರ್ಯವನ್ನು ಸುಧಾರಿಸುತ್ತದೆ ಮತ್ತು ನಿಮ್ಮ ಕೀಲುಗಳನ್ನು ಹೆಚ್ಚು ಒತ್ತಡವಿಲ್ಲದೆ ನಿಮ್ಮ ಕಾಲಿನ ಸ್ನಾಯುಗಳನ್ನು ಬಲಪಡಿಸುತ್ತದೆ. ಇದು ನಿಮ್ಮ ಕ್ವಾಡ್ಗಳು, ಗ್ಲುಟ್ಸ್, ಹ್ಯಾಮ್ಸ್ಟ್ರಿಂಗ್ಗಳನ್ನು ಗುರಿಯಾಗಿಸುತ್ತದೆ.
ತೂಕವನ್ನು ಕಳೆದುಕೊಳ್ಳಲು ಸಹಕಾರಿ
ಅಭ್ಯಾಸವಾಗಿ ಸೈಕ್ಲಿಂಗ್ ಮಾಡುವುದು, ವಿಶೇಷವಾಗಿ ಹೆಚ್ಚಿನ ತೀವ್ರತೆಯಲ್ಲಿ, ನಿಮ್ಮ ದೇಹದ ಕೊಬ್ಬಿನ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದು ಆರೋಗ್ಯಕರ ತೂಕ ನಿರ್ವಹಣೆಯನ್ನು ಉತ್ತೇಜಿಸುತ್ತದೆ.
ಆರಂಭಿಕರಿಗೆ ಸೈಕ್ಲಿಂಗ್ ಉತ್ತಮ
ನೀವು ಫಿಟ್ನೆಸ್ ಪ್ರಯಾಣದಲ್ಲಿ ಹೊಸಬರಾಗಿದ್ದರೆ ಅಥವಾ ಗಾಯ ಅಥವಾ ಅನಾರೋಗ್ಯದಿಂದ ಚೇತರಿಕೆ ಹೊಂದುತ್ತಿದ್ದರೆ, ನೀವು ಕಡಿಮೆ ತೀವ್ರತೆಯಲ್ಲಿ ಸೈಕಲ್ ಮಾಡಬಹುದು. ನೀವು ಹೆಚ್ಚು ಫಿಟ್ ಆಗುತ್ತಿದ್ದಂತೆ, ಇದರ ತೀವ್ರತೆಯನ್ನು ಹೆಚ್ಚಿಸಬಹುದು. ಸ್ಟ್ಯಾಂಡರ್ಡ್ ಬೈಸಿಕಲ್ನೊಂದಿಗೆ ನಿಮಗೆ ಕಷ್ಟವಾಗಿದ್ದರೆ, ಸ್ಥಾಯಿ ಬೈಕುಗಳು ಉತ್ತಮ ಪರ್ಯಾಯವಾಗಿದೆ.
ಸೈಕ್ಲಿಂಗ್ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ
ಸೈಕ್ಲಿಂಗ್ನ ಆರೋಗ್ಯ-ವರ್ಧಿಸುವ ಪರಿಣಾಮಗಳು ಕೊಲೆಸ್ಟ್ರಾಲ್ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ನಿಮ್ಮ ಹೃದಯರಕ್ತನಾಳದ ಆರೋಗ್ಯವನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ಪಾರ್ಶ್ವವಾಯು ಮತ್ತು ಹೃದಯಾಘಾತದ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ.