ಶಿವಮೊಗ್ಗ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪವಿತ್ರ ವಸ್ತ್ರ ಅಭಿಯಾನದಲ್ಲಿ ಸಾಗರ ತಾಲೂಕು ಹೆಗ್ಗೂಡು ಗ್ರಾಮದ ಚರಕ ಸಂಸ್ಥೆಗೆ ಸರ್ಕಾರದಿಂದ ಬರಬೇಕಿದ್ದ ಹಣಕ್ಕೆ ಲಂಚದ ಬೇಡಿಕೆ ವಿರುದ್ದ ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಚರಕ ಸಂಸ್ಥೆ ಪ್ರತಿಭಟನೆ ನಡೆಸಿದೆ. ಚರಕ ಸಂಸ್ಥೆಯ ಮುಖ್ಯಸ್ಥರು ಹಾಗೂ ಸ್ವದೇಶಿ ಚಳುವಳಿ ಹೋರಾಟಗಾರರಾದ ಪ್ರಸನ್ನ ರವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಪವಿತ್ರ ವಸ್ತ್ರ ಯೋಜನೆಯಡಿ ರಾಜ್ಯ ಸರ್ಕಾರ ನಮಗೆ ನೀಡಿದ ಪ್ರಾಜೆಕ್ಟ್ ಅನ್ನು ಪೂರ್ಣಗೊಳಿಸಿದ್ದೆವೆ.
ಈ ಯೋಜನೆಯಡಿ ನಮಗೆ ಕಳೆದ 8 ವರ್ಷಗಳಿಂದ ನಮಗೆ ಯಾವುದೇ ಅನುದಾನ ಬಂದಿಲ್ಲ. ಈ ಹಣಕ್ಕಾಗಿ ನಾವು ಕೈ ಮಗ್ಗದ ಕಚೇರಿ ಅಲೆದು , ಮನವಿ ಸಲ್ಲಿಸಿ, ಪ್ರಸ್ತಾಪನೆ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ. ನಮ್ಮ ಹಣಕ್ಕೆ ಇಲಾಖೆಯ ಕಚೇರಿ ಅಲೆದು ಅಲೆದು ಸುಸ್ತಾಗಿದೆ. ಆದರೂ ನಮ್ಮ ಹಣ ನಮಗೆ ಸಿಗಲಿಲ್ಲ. ಅಧಿಕಾರಿಗಳಿಗೆ ಶೇ 40 ರಷ್ಟು ಹಣ ನೀಡದ ಕಾರಣ ನಮಗೆ ನಮ್ಮ ಹಣ ಬಿಡುಗಡೆಯಾಗಿಲ್ಲ. ಜಿಲ್ಲಾ ಖಜಾನೆಯಿಂದ ಹಣ ಬಿಡುಗಡೆ ಮಾಡಿಸಿಕೊಂಡ ಕೈ ಮಗ್ಗದ ಅಧಿಕಾರಿಗಳು ಖಾಸಗಿ ಬ್ಯಾಂಕ್ ನಲ್ಲಿ ಹಣವನ್ನು ಜಮೆ ಮಾಡಿಕೊಂಡಿದ್ದಾರೆ. ನಮ್ಮ ರಾಜ್ಯದ ವಿದ್ಯಾ ಸಿರಿ ಯೋಜನೆಯಡಿ ಶಾಲಾ ಮಕ್ಕಳಿಗೆ ಸೇಲಂ ಹಾಗೂ ಸೂರತ್ ನಿಂದ ಬಟ್ಟೆ ತಂದು ನೀಡಲಾಗುತ್ತಿದೆ.
ಡಿಸಿ ಕಚೇರಿ ಎದುರು ಚರಕ ಸಂಸ್ಥೆಯ ಮಹಿಳೆಯರು ಪ್ರತಿಭಟನೆ ನಡೆಸುತ್ತಿರುವ ವೇಳೆ ಡಿಸಿ ಕಚೇರಿರವರ ಮ್ಯಾನೇಜರ್ ರವರು ಬಂದು ಮನವಿ ಸ್ವೀಕರಿಸಲು ಹೋದಾಗ, ಪ್ರತಿಭಟನಗಾರರು ಮನವಿ ನೀಡಲು ಒಪ್ಪಲಿಲ್ಲ. ನಮಗೆ ಡಿಸಿ ರವರೇ ಬೇಕು ಎಂದು ಮ್ಯಾನೇಜರ್ ರನ್ನು ವಾಪಸ್ ಕಳುಹಿಸಿದರು. ಡಿಸಿ ರವರು ಸಭೆಯಲ್ಲಿ ಇದ್ದಾರೆ ಎಂದು ಕೇಳದೆ ನಾವು ಅವರು ಬರುವ ತನಕ ಇಲ್ಲಿಯೇ ಕುಳಿತು ಕೊಂಡಿರುತ್ತೆವೆ ಎಂದಾಗ ಕೊನೆಗೆ ಡಿಸಿ ರವರೆ ಬಂದು ಮನವಿ ಸ್ವೀಕರ ಮಾಡಿದರು. ಇದನ್ನು ಸಿದ್ದರಾಮಯ್ಯನವರು ಸರಿ ಮಾಡುವುದಾದರೆ, ಇದರ ಮೂಲಕ್ಕೆ ಹೋಗಬೇಕಾಗುತ್ತದೆ ಎಂದರು. ಬಡವರ ಉದ್ಯೋಗ ನೀಡುವುದು ಕೈಗಾರಿಕೆ ಹಾಗೂ ಕೃಷಿ ಎಂದರು.
ಇದನ್ನು ಕಡೆಗಣಿಸಿ, ಕೆಎಸ್ಐಡಿಎಸ್, ಕಾವೇರಿಯನ್ನು ಕಡೆಗಣಿಸಿ,ವಿದ್ಯಾ ವಿಕಾಸ ಯೋಜನೆಗಾಗಿ, ಸೇಲಂನಿಂದ ಸೂರತ್ ನಿಂದ ಸಿಂಥೆಟಿಕ್ ಬಟ್ಟೆ ತಂದು ನೀಡುತ್ತಿರುವ ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ ನಾಚಿಕೆ ಆಗಬೇಕು ಎಂದರು. ಅಂತಹ ಅಧಿಕಾರಿಗಳ ಮೇಲೆ ಎಫ್ ಐ ಆರ್ ಆಗಿದೆ.ಅವರು ಹೊರಗಡೆ ತಿರುಗಾಡುತ್ತಿದ್ದಾರೆ. ಕೈ ಮಗ್ಗ ಕ್ಷೇತ್ರ ಸಾಯುತ್ತಿದೆ. ಇದು ಎಲ್ಲಾರಿಗೂ ತಿಳಿಯಬೇಕಿದೆ. ಅದಾನಿ, ಅಂಬಾನಿರವರ ಹೊಟ್ಟೆಯನ್ನು ಗುಡಾಣ ಮಾಡದರೆ, ಅದರಿಂದ ದೇಶ ಉದ್ದಾರ ಆಗಲ್ಲ.,ಬಡವರು ಹೊಟ್ಟೆ ಮೇಲೆ ಹೊಡೆಯದೆ ಹಣ ಬಿಡುಗಡೆ ಮಾಡಿ ಎಂದು ಚರಕದ ಪ್ರಸನ್ನ ಆಗ್ರಹಿಸಿದ್ದಾರೆ.
ಕಳೆದ 8 ವರ್ಷಗಳಿಂದ ನಾವು ಪವಿತ್ರ ವಸ್ತ್ರ ಅಭಿಯಾನದ ವಿಚಾರದಲ್ಲಿ ನಾವು ಕೆಲಸ ಮಾಡುತ್ತಿದ್ದವೆ. ಈ ಯೋಜನೆಯ ಹಣ ನಮಗೆ 93 ಲಕ್ಷ ರೂ ಹಣ ಬರಬೇಕಿತ್ತು. ಆದರೆ ಇದುವರೆಗೂ ಹಣ ಬಂದಿಲ್ಲ. ಇದರಿಂದ ನಾವು ಹೋರಾಟಕ್ಕೆ ಬಂದಿದ್ದೆವೆ. ಹಣ ಬಾರದ ಕಾರಣ ಅನೇಕ ಕುಟುಂಬಗಳು ಬೀದಿಗೆ ಬಿದ್ದಿವೆ. ಇದರಿಂದ ಅಂತಹವೆ ಪರ ನಾವು ಹೋರಾಟಕ್ಕೆ ಇಳಿದಿದ್ದವೆ.
ನಾವು ಮಹಿಳೆಯರಿಗೆ ಕೆಲಸ ಕೊಡಲು ಕರೆದುಕೊಂಡು ಬಂದಿದ್ದವೆ. ಈಗ ಅವರಿಗೆ ಹಣ ನೀಡದೆ ಹೋದ್ರೆ ಏನ್ ಮಾಡೂಡು, ಅದಕ್ಕಾಗಿ ನಾವು ಹೋರಾಟಕ್ಕೆ ಮುಂದಾಗಿದ್ದವೆ ಎಂದು ಚರಕದ ಅಧ್ಯಕ್ಷೆ ಗೌರಮ್ಮ ಒತ್ತಾಯಿಸಿದ್ದಾರೆ. ಮನವಿ ಸ್ವೀಕಾರ ಮಾಡಿದ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ರವರು, ಕೈ ಮಗ್ಗದ ಇಲಾಖೆಯ ಕುರಿತು ಚರಕ ಸಂಸ್ಥೆ ರವರು ನೀಡಿದ ದೂರಿನ ಮೇರೆಗೆ ತನಿಖೆಗೆ ನಡೆಸಲು ನಾನು ಸೂಚಿಸುತ್ತೆನೆ. ನಮ್ಮ ಕಚೇರಿಯ ಕೆಎಎಸ್ ಅಧಿಕಾರಿಗಳಿಂದ ತನಿಖೆ ನಡೆಸುತ್ತೆವೆ. ನಂತರ ಕ್ರಮ ತೆಗೆದುಕೊಳ್ಳುತ್ತೆವೆ ಎಂದರು.