ಮೈಸೂರು: ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ಇಂದು ಸಂಜೆ ೬.೩೦ಕ್ಕೆ ಸರಸ್ವತಿಪುರಂ ಕೃಷ್ಣಧಾಮದಲ್ಲಿ ಕೆ.ಆರ್. ಕ್ಷೇತ್ರದ ನೂತನ ಶಾಸಕ ಟಿ.ಎಸ್. ಶ್ರೀವತ್ಸ ಅವರನ್ನು ಅಭಿನಂದಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅಧ್ಯಕ್ಷ ಡಿ.ಟಿ. ಪ್ರಕಾಶ್ ತಿಳಿಸಿದರು.ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,
ಕೆ.ಆರ್. ಕ್ಷೇತ್ರದಲ್ಲಿ ಚುನಾವಣೆ ಅಭ್ಯರ್ಥಿ ಘೋಷಿಸುವ ವೇಳೆ ಬದಲಾವಣೆ ತರಬೇಕೆಂದು ಬಿಜೆಪಿಯನ್ನು ಸಂಘ ಆಗ್ರಹಿಸಿತ್ತು. ಅದರಂತೆ ಹೊಸ ಮುಖ ಪ್ರಕಟಿಸಿದಾಗ ಕಾಂಗ್ರೆಸ್ ಗ್ಯಾರೆಂಟಿ ಕಾರ್ಯಕ್ರಮ, ಆಡಳಿತ ವಿರೋಧಿ ಅಲೆ ನಡುವೆ ಅವರನ್ನು ಗೆಲ್ಲಿಸುವಂತೆ ಮಾಡುವುದು ಸವಾಲಿನ ಕೆಲಸವಾಗಿತ್ತು. ಆದರೂ ಎಲ್ಲ ವಿಪ್ರ ಸಂಘಟನೆಗಳು ಒಗ್ಗೂಡಿ ಶ್ರಮಿಸಿ ಅವರ ಗೆಲುವಿಗೆ ಕಾರಣವಾಗಿರುವುದಾಗಿ ತಿಳಿಸಿದರು