ಮೈಸೂರು : ನೂತನ ಸಂಸತ್ ಭವನ ಉದ್ಘಾಟನೆಯಾದ ರೀತಿ ದೇಶದ ಸಂವಿಧಾನವನ್ನೇ ಅಣಕ ಮಾಡಿದಂತಿದೆ. ಕಾರ್ಯಕ್ರಮ ಕೇವಲ ಪ್ರಧಾನಿ ನರೇಂದ್ರ ಮೋದಿ ಅವರ ಪಟ್ಟಾಭಿಷೇಕದಂತಾಗಿದ್ದು ಅಂಬೇಡ್ಕರ್, ರಾಷ್ಟ್ರಪತಿಗೆ ಅಪಮಾನ ಮಾಡಲಾಗಿದೆ ಎಂದು ಎಂಎಲ್ಸಿ ಹೆಚ್.ವಿಶ್ವನಾಥ್ ವಾಗ್ದಾಳಿ ನಡೆಸಿದರು. ಜಿಲ್ಲಾ ಪತ್ರಕರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸತ್ತಿನ ಬಗ್ಗೆ ಅಪಾರ ಅಭಿಮಾನ, ನಂಬಿಕೆಯಿಂದ. ಮೇ 28ರಂದು ನಡೆದ ಉದ್ಘಾಟನಾ ಕಾರ್ಯಕ್ರಮ ಸಂವಿಧಾನದ ಅಣಕದಂತಿದೆ.
ಇದು ಪ್ರಧಾನಮಂತ್ರಿ ನೇತೃತ್ವದಲ್ಲಿ ಆಗಿದ್ದು ನೋವು ತಂದಿದೆ. ಅಂದು ಅಂಬೇಡ್ಕರ್ ಅವರಿಗೂ ಗೌರವ ಕೊಡಲಿಲ್ಲ. ರಾಷ್ಟ್ರಪತಿ ಗಳನ್ನೂ ಕರೆಯಲಿಲ್ಲ. ಕಾರ್ಯಕ್ರಮ ಕೇವಲ ಮೋದಿ ಪಟ್ಟಾಭಿಷೇಕದಂತಿತ್ತು. ಸಂಸತ್ ಭವನ ಇರಲೇ ಇಲ್ಲವೇನೋ, ಯಾರೂ ದೇಶಕ್ಕೆ ಏನು ಮಾಡಲಿಲ್ಲವೇನೋ, ನಾನಷ್ಟೇ ದೇಶದ ಸಂರಕ್ಷಕ ಎಂದು ಯುವಜನತೆಯಲ್ಲಿ ಭ್ರಮೆ ಬಿತ್ತುವ ಕೆಲಸವನ್ನು ಮೋದಿ ಮಾಡಿದರು. ಇದು ದೇಶದ 140 ಕೋಟಿ ಜನರಿಗೆ ಮಾಡಿದ ಅವಮಾನ ಎಂದು ಕಿಡಿ ಕಾರಿದರು.