ನವದೆಹಲಿ: ಒಡಿಶಾದ ಬಾಲಸೋರ್ ಜಿಲ್ಲೆ ಬಹನಾಗ ಬಳಿ ಸಂಭವಿಸಿದ ರೈಲು ಅಪಘಾತಕ್ಕೆ ಸಂಬಂಧಿಸಿದಂತೆ ಪರಿಸ್ಥಿತಿ ಅವಲೋಕಿಸಲು ಪ್ರಧಾನಿ ನರೇಂದ್ರ ಮೋದಿಯವರು ಉನ್ನತಮಟ್ಟದ ಸಭೆ ಕರೆದಿದ್ದಾರೆ.
ಒಡಿಶಾ ರೈಲು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಯ್ಯಪ್ಪನಹಳ್ಳಿ SMVTನಿಂದ 994 ಮಂದಿ ರಿಸರ್ವ್ಡ್ ಪ್ಯಾಸೆಂಜರ್ಗಳು, 300 ಅನ್ ರಿಸರ್ವ್ಡ್ ಪ್ಯಾಸೆಂಜರ್ ಗಳು ಸೇರಿ ಒಟ್ಟು 1294 ಮಂದಿ ಪ್ರಯಾಣ ಮಾಡಿದ್ದರು. ಇದೀಗ ಅಪಘಾತ ಹಿನ್ನಲೆ ಇಂದಿನ ರೈಲುಗಳ ಪ್ರಯಾಣವನ್ನ ರದ್ದು ಮಾಡಲಾಗಿದೆ.
ಇದೀಗ ಘಟನಾ ಸ್ಥಳಕ್ಕೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತಿದ್ದಾರೆ.