ಅಶ್ವಿನಿ ನಕ್ಷತ್ರ ಧಾರವಾಹಿ ಮೂಲಕ ಖ್ಯಾತಿ ಘಳಿಸಿ ಬಳಿಕ ಒಂದಷ್ಟು ಸಿನಿಮಾಗಳಿಗೆ ಬಣ್ಣ ಹಚ್ಚಿ ಬಿಗ್ ಮಾಸ್ ಮೂಲಕ ಮನೆ ಮಾತದ ನಟ ಜೆಕೆ ಹಿಂದಿ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಮಾಡೆಲಿಂಗ್ ಹಾಗೂ ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಜೆಕೆ ಇದೀಗ ಕನ್ನಡ ಚಿತ್ರರಂಗಕ್ಕೆ ಗುಡ್ ಬಾಯ್ ಹೇಳಲು ರೆಡಿಯಾಗಿದ್ದಾರೆ ಎನ್ನಲಾಗುತ್ತಿದೆ.
‘ಅಶ್ವಿನಿ ನಕ್ಷತ್ರ’ ಧಾರವಾಹಿ ಸಮಯದಲ್ಲೇ ಎರಡು ದೋಣೆಯ ಮೇಲೆ ಕಾಲಿಡುವುದು ಸೂಕ್ತವಲ್ಲ ಎನಿಸಿ ಕೆಲಸ ಬಿಟ್ಟು ನಟನೆಯನ್ನು ಪೂರ್ಣ ವೃತ್ತಿಯನ್ನಾಗಿ ಮಾಡಿಕೊಂಡೆ. ನನ್ನ ಮೊದಲ ಸೀರಿಯಲ್ನಿಂದಲೇ ಜನ ಪ್ರೀತಿಸಲು ಶುರು ಮಾಡಿದ್ದರು. ನನ್ನ ನಟನೆಯನ್ನ ಒಪ್ಪಿಕೊಂಡರು. ನಾನು ಕನ್ನಡ ಭಾಷೆಯನ್ನು ಬಹುವಾಗಿ ಪ್ರೀತಿಸುತ್ತೇನೆ, ಆದರೆ ಕೆಲವರಿಗೆ ನಾನಿಲ್ಲಿ ಇರುವುದು ಇಷ್ಟವಿಲ್ಲ ಹಾಗಾಗಿ ನಾನು ಹೋಗುತ್ತಿದ್ದೇನೆ ಎಂದಿದ್ದಾರೆ.
ಹಿಂದಿ ಧಾರಾವಾಹಿ ಮಾಡುತ್ತ, ಒಳ್ಳೆಯ ಹೆಸರು ಗಳಿಸಿದ್ದೆ. ಹಿಂದಿ ಸಿನಿಮಾ ಒಂದರ ಹಿಂದೆ ಮತ್ತೊಂದು ಅವಕಾಶ ಸಹ ನನಗೆ ದೊರಕಿತ್ತು ಇನ್ನೇನು ಚಿತ್ರೀಕರಣ ಪ್ರಾರಂಭವಾಗಬೇಕು ಅನ್ನೋವಷ್ಟರಲ್ಲಿ ಆ ಅವಕಾಶವನ್ನ ತಪ್ಪಿದ್ದರು. ನನಗೇ ನೇರವಾಗಿ ಸವಾಲು ಹಾಕಿ 2022ರ ವೇಳೆಗೆ ಇಂಡಸ್ಟ್ರಿ ಬಿಡುಸುತ್ತೇವೆ ಎಂದು ಅವಾಜ್ ಹಾಕಿದ್ದಾರೆ . ನನಗೆ ಅವಾಜ್ ಹಾಕಿದ್ದು ಯಾರು ಎಂದು ಹೇಳಿದರೆ ಅದು ವಿವಾದವಾಗುತ್ತದೆ, ಅದಕ್ಕೆ ಪೂರಕವಾದ ವಿಡಿಯೋ ಸಾಕ್ಷಿಗಳನ್ನೆಲ್ಲ ಒದಗಿಸಬೇಕಾಗುತ್ತದೆ ಅವೆಲ್ಲವೂ ನನ್ನ ಬಳಿ ಇಲ್ಲ. ಆದರೆ ಚಿತ್ರರಂಗದಿಂದ ದೂರ ಹೋಗುವ ವಿಚಾರವನ್ನಂತೂ ಮಾಡಿದ್ದೇನೆ ಎಂದಿದ್ದಾರೆ.
ಸದ್ಯ ನನ್ನ ಮುಂದಿರುವ ಸವಾಲೆಂದರೆ ‘ಐರಾವನ್’ ಸಿನಿಮಾದ ಬಿಡಗುಡೆ ಮತ್ತು ‘ಕಾಡ’ ಸಿನಿಮಾದ ಬಿಡುಗಡೆ ಇದೆರಡನ್ನೂ ಮುಗಿಸಿ ನಾನು ಮುಂದಿನ ಹೆಜ್ಜೆ ಇಡುತ್ತೇನೆ. ಈ ನಿರ್ಧಾರ ನನ್ನ ಪಾಲಿಗೆ ಬಹಳ ಕಠಿಣವಾದ ನಿರ್ಧಾರ ಆದರೆ ಈ ನಿರ್ಧಾರವನ್ನು ನಾನು ತೆಗೆದುಕೊಳ್ಳಲೇ ಬೇಕಿದೆ ಎಂದು ಜೆಕೆ ತಿಳಿಸಿದ್ದಾರೆ.